ದೇಶ

'ನನ್ನ ವಿರುದ್ಧ ಒಂದೇ ಒಂದು ಆರೋಪ ಹೊರಿಸಲಾಗಿಲ್ಲ': 106 ದಿನಗಳ ಜೈಲುವಾಸದ ನಂತರ ಚಿದಂಬರಂ ಹೇಳಿದ್ದಿಷ್ಟು

Raghavendra Adiga

ನವದೆಹಲಿ: 105 ದಿನಗಳ ಜೈಲುವಾಸದ ನಂತರ ಬಿಧವಾರ ತಿಹಾರ್ ಜೈಲಿನಿಂದ ಬಿಡುಅಡೆಯಾದ ಮಾಜಿ ಕೇಂದ್ರ ಸಚಿವ  ಪಿ.ಚಿದಂಬರಂ  ರಾತ್ರಿ 8.10 ಕ್ಕೆ ಜೈಲಿನ ಗೇಟ್ ನಂ 3 ರಿಂದ ಹೊರಬಂದಿದ್ದಾರೆ. ಆ ವೇಳೆ ನೂರಾರು ಕಾಂಗ್ರೆಸ್ ಬೆಂಬಲಿಗರು ಚಿದಂಬರಂ ಅವರಿಗೆ ಸ್ವಾಗತ ಕೋರಿದ್ದಾರೆ.

 ಮಾಜಿ ಕೇಂದ್ರ ಹಣಕಾಸು ಸಚಿವರಿಗೆ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬಿಧವಾರ ಷರತ್ತುಬದ್ದ ಜಾಮೀನು ನೀಡಿದೆ.

ಜೈಲಿನಿಂದ ಚಿದಂಬರಂ ಹೊರಬರುವ ಸಮಯ ಅವರ ಪುತ್ರ ಕಾರ್ತಿ  ಅವರನ್ನು ಸ್ವಾಗತಿಸಲು ಆಗಮಿಸಿದ್ದರು.ಉದ್ದನೆಯ ತೋಳಿನ ಬಿಳಿ ಶರ್ಟ್ ಮತ್ತು ಧೋತಿ ಧರಿಸಿ, ಮಾಜಿ ಕೇಂದ್ರ ಸಚಿವರು ಅವರ ಜೋರ್ ಬಾಗ್ ಮನೆಗೆ ಕಾರಿನಲ್ಲಿ ತೆರಳಿದ್ದಾರೆ. ಈ ನಡುವೆ ಅವರು ಸುದ್ದಿಗಾರರೊಡನೆ ಮಾತನಾಡಿ "ಸಧ್ಯ ನಾನೇನೂ ಹೇಳಲಾಗುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವವನಿದ್ದೇನೆ. ಆದರೆ ನನ್ನ ವಿರುದ್ಧ ಒಂದೇ ಒಂದು ಆರೋಪವನ್ನು ಸಾಬೀತುಪಡಿಸಲು ಸಹ ಆಗಿಲ್ಲ" ಎಂದರು.

"ಸತ್ಯವೆಂದರೆ, 106 ದಿನಗಳ ನಂತರ ಸಹ ನನ್ನ ವಿರುದ್ಧ ಒಂದೇ ಒಂದು ಆರೋಪವನ್ನು ರೂಪಿಸಲಾಗಿಲ್ಲ" 

ಚಿದಂಬರಂ ಗುರುವಾರ ರಾಜ್ಯಸಭಾ ಕಲಾಪಕ್ಕೆ ಹಾಜರಾಗುವ ನಿರೀಕ್ಷೆ ಇದೆ.

ಸೋನಿಯಾ ನಿವಾಸಕ್ಕೆ ತೆರಳಿದ ಚಿದು

ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಆಗಮಿಸಿದ್ದಾರೆ.

"ನಾನು ನಾಳೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತೇನೆ. 106 ದಿನಗಳ ನಂತರ ನಾನು ಹೊರಬಂದು ಸ್ವಾತಂತ್ರ್ಯಅನುಭವಿಸುತ್ತಿದ್ದೇನೆ. ಇದು ನನಗೆ ಸಂತಸ ತಂದಿದೆ" ಚಿದಂಬರಂ ಹೇಳಿದರು. 

SCROLL FOR NEXT