ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

50 ವರ್ಷಕ್ಕೂ ಮೇಲ್ಪಟ್ಟ 32 ರೈಲ್ವೆ ಅಧಿಕಾರಿಗಳಿಗೆ 'ಅಕಾಲಿಕ ನಿವೃತ್ತಿ'

ಅಪರೂಪ ಎಂಬಂತೆ 50 ವರ್ಷಕ್ಕೂ ಮೇಲ್ಪಟ್ಟ 32 ರೈಲ್ವೆ ಅಧಿಕಾರಿಗಳ ನೀರಸ ಸಾಮರ್ಥ್ಯ ಪ್ರದರ್ಶನದಿಂದಾಗಿ ಅವರಿಗೆ ಅವಧಿಗೂ ಮುನ್ನವೇ ನಿವೃತ್ತಿ ನೀಡಲಾಗಿದೆ.

ಸಾಂದರ್ಭಿಕ ಚಿತ್ರ
Nagaraja AB
Updated On : 6 Dec 2019, 8:20 pm

ನವ ದೆಹಲಿ: ಅಪರೂಪ ಎಂಬಂತೆ 50 ವರ್ಷಕ್ಕೂ ಮೇಲ್ಪಟ್ಟ 32 ರೈಲ್ವೆ ಅಧಿಕಾರಿಗಳ ನೀರಸ ಸಾಮರ್ಥ್ಯ ಪ್ರದರ್ಶನದಿಂದಾಗಿ ಅವರಿಗೆ ಅವಧಿಗೂ ಮುನ್ನವೇ ನಿವೃತ್ತಿ ನೀಡಲಾಗಿದೆ.

ಆಗಾಗ್ಗೆ ನಡೆಸುವ ಪರಿಶೀಲನೆಯಲ್ಲಿ  ಅಸಮರ್ಥತತೆ, ಅಪರಿಪೂರ್ಣತೆ ಕಂಡುಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ 50 ವರ್ಷಕ್ಕೂ ಮೇಲ್ಪಟ್ಟ 32 ಅಧಿಕಾರಿಗಳಿಗೆ ಅಕಾಲಿಕ ನಿವೃತ್ತಿ ಘೋಷಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

2016-17ರಲ್ಲಿ  ಮೊದಲ ಬಾರಿಗೆ ನಾಲ್ಕು ಅಧಿಕಾರಿಗಳಿಗೆ ಇದೇ ರೀತಿಯಲ್ಲಿ ಅಕಾಲಿಕ ನಿವೃತ್ತಿ ನೀಡಲಾಗಿತ್ತು. ನಿರ್ದಿಷ್ಟ ವಯಸ್ಸು ತಲುಪುವವರ ಬಗ್ಗೆ ಆಗಾಗ್ಗೆ  ಪರಿಶೀಲನೆ ನಡೆಸುವುದು ಸರ್ಕಾರಿ ನೌಕರರ ಸೇವಾ ನಿಯಮಗಳ ಭಾಗವಾಗಿದೆ. ಆದರೆ ಅವರು ಅಕಾಲಿಕವಾಗಿ ನಿವೃತ್ತರಾಗುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement