ದೇಶ

ವಿವರಗಳು ಸರಿಯಾಗಿ ಗೊತ್ತಾಗುವವರೆಗೂ ನಾವು ಖಂಡಿಸಲು ಹೋಗಬಾರದು: ಶಶಿ ತರೂರ್ 

Sumana Upadhyaya

ನವದೆಹಲಿ:ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಸುಟ್ಟು ಕೊಂದುಹಾಕಿದ ನಾಲ್ವರು ಆರೋಪಿಗಳನ್ನು ಶುಕ್ರವಾರ ನಸುಕಿನ ಜಾವ ಪೊಲೀಸರು ಎನ್ ಕೌಂಟರ್ ನಲ್ಲಿ ಕೊಂದು ಹಾಕಿರುವ ಘಟನೆ ಬಗ್ಗೆ ಸರಿಯಾದ ವಿವರಗಳು ಹೊರಬರುವವರೆಗೆ ಜನರು ಖಂಡಿಸಲು ಮುಂದಾಗಬಾರದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.


ಹತ್ಯೆ ನಡೆದು ವೈದ್ಯೆಯನ್ನು ಕೊಂದು ಹಾಕಿದ್ದ ಸ್ಥಳಕ್ಕೆ ಆರೋಪಿಗಳನ್ನು ಇಂದು ನಸುಕಿನ ಜಾವ ಕರೆದುಕೊಂಡು ಹೋಗುತ್ತಿದ್ದಾಗ ಅವರು ತಪ್ಪಿಸಲು ಯತ್ನಿಸಿದಾಗ ಎನ್ ಕೌಂಟರ್ ಮಾಡಿ ಕೊಂದು ಹಾಕಲಾಯಿತು ಎಂದು ತೆಲಂಗಾಣ ಪೊಲೀಸರು ಹೇಳುತ್ತಾರೆ.
ತೆಲಂಗಾಣ ಪೊಲೀಸರ ಕ್ರಮವನ್ನು ಪತ್ರಕರ್ತೆಯೊಬ್ಬರು ಟ್ವೀಟ್ ಮಾಡಿ ಎನ್ ಕೌಂಟರ್ ಕ್ರಮ ಹೆಚ್ಚುವರಿ ನ್ಯಾಯಾಂಗ ಹತ್ಯೆಯೆನಿಸಬಹುದು. ಇದು ಭಾರತೀಯ ಸಾಮಾಜಿಕ ವ್ಯವಸ್ಥೆಗೆ ಅಪಾಯವಾಗಿದೆ. ಅತ್ಯಾಚಾರ ಮಾಡಿ ಕೊಂದು ಹಾಕಿದ ಪುರುಷರು ತಪ್ಪಿತಸ್ಥರಾಗಿದ್ದರೆ ಇಲ್ಲಿ ಪೊಲೀಸರು ಸಹ ತಪ್ಪಿತಸ್ಥರು. ಪ್ರಕರಣ ನ್ಯಾಯಾಂಗದಲ್ಲಿ ವಿಚಾರಣೆ ಹಂತದಲ್ಲಿ ಇರುವಾಗ ಹತ್ಯೆ ಮಾಡುವುದು ಸರಿಯಾದ ಕ್ರಮವಾಗುವುದಿಲ್ಲ.  ಇಲ್ಲಿ ಪೊಲೀಸರ ಕ್ರಮವನ್ನು ಒಪ್ಪಿಕೊಂಡರೆ ಮರ್ಯಾದಾ ಹತ್ಯೆಯನ್ನು ಕೂಡ ನಾವು ಒಪ್ಪಿಕೊಂಡಂತಲ್ಲವೇ ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು.


ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಶಶಿ ತೂರ್ ತಾತ್ವಿಕವಾಗಿ ನಿಮ್ಮ ಮಾತು ಒಪ್ಪತಕ್ಕದ್ದೇ. ಈ ಬಗ್ಗೆ ನಾವು ಇನ್ನಷ್ಟು ತಿಳಿದುಕೊಳ್ಳಬೇಕಿದೆ. ಆರೋಪಿಗಳು ಶಸ್ತ್ರಸಜ್ಜಿತರಾಗಿದ್ದಿದ್ದರೆ ಮುಂಜಾಗ್ರತೆಯಾಗಿ ಪೊಲೀಸರು ಗುಂಡು ಹಾರಿಸುವುದರಲ್ಲಿ ನ್ಯಾಯವಿದೆ. ಈ ಬಗ್ಗೆ ಸರಿಯಾದ ಮಾಹಿತಿ ಸಿಗುವವರೆಗೂ ನಾವು ಖಂಡಿಸಲು ಮುಂದಾಗಬಾರದು. ಆದರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ಅದು ಮುಗಿಯುವ ಮೊದಲೇ ಪೊಲೀಸರು ಆರೋಪಿಗಳನ್ನು ಹತ್ಯೆ ಮಾಡುವುದು ಕಾನೂನಿನಲ್ಲಿ ಸಮ್ಮತವಲ್ಲ ಎಂದು ಹೇಳಿದ್ದಾರೆ.

SCROLL FOR NEXT