ಸಂಗ್ರಹ ಚಿತ್ರ 
ದೇಶ

ಪಶ್ಚಿಮ ಬಂಗಾಳ: ಆಟಿಕೆ ಕೊಡಿಸೋದಾಗಿ ಕರೆದೊಯ್ದು 9ತಿಂಗಳ ಬಾಲಕಿ ಮೇಲೆ ಅತ್ಯಾಚಾರ!

ಒಂಬತ್ತು ತಿಂಗಳ ಹೆಣ್ಣು ಮಗುವನ್ನು ಆಟಿಕೆ ಕೊಡಿಸುವುದಾಗಿ ಕರೆದೊಯ್ದ ಆಕೆಯ ದೊಡ್ಡಪ್ಪ ಮಗುವಿನ ಮೇಲೆ ಅತ್ಯಾಚಾರ ನಡೆಸಿರುವ ಭೀಕರ ಬ್ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದಿದೆ.

ಕೋಲ್ಕತ್ತಾ:  ಒಂಬತ್ತು ತಿಂಗಳ ಹೆಣ್ಣು ಮಗುವನ್ನು ಆಟಿಕೆ ಕೊಡಿಸುವುದಾಗಿ ಕರೆದೊಯ್ದ ಆಕೆಯ ದೊಡ್ಡಪ್ಪ ಮಗುವಿನ ಮೇಲೆ ಅತ್ಯಾಚಾರ ನಡೆಸಿರುವ ಭೀಕರ ಬ್ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ಥ ಮಗು ಆರೋಪಿಯ ಪಕ್ಕದ ಮನೆಯಲ್ಲಿ ತನ್ನ ಪೋಷಕರೊಡನೆ ವಾಸವಿತ್ತು. ಸಧ್ಯ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.

ಅನುಪ್ ಪ್ರಮಣಿಕ್ ಎಂಬಾತ  ಮಗುವಿನ ಮನೆಗೆ ಭೇಟಿ ನೀಡಿ ಅವಳನ್ನು ತನ್ನೊಂದಿಗೆ ಹೊರಗೆ ಕರೆದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆಅವನು ಅವಳಿಗೆ ಕೆಲವು ಆಟಿಕೆಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ್ದ. "ಪ್ರಮಣಿಕ್ ಬಾಲಕಿಯ ತಂದೆಯ ಹಿರಿಯ ಸೋದರನಾಗಿದ್ದು ಆತ ಹತ್ತಿರದ ಸಂಬಂಧಿಯಾಗಿದ್ದ ಕಾರಣ ಮಗುವಿನ ಪೋಷಕರಿಗೆ ಅವನ ಮೇಲೆ ಅನುಮಾನ ಬರಲಿಲ್ಲ"

ಆದರೆ ಸುಮಾರು ಒಂದು ಗಂಟೆಯ ಬಳಿಕ ಹಿಂತಿರುಗಿದ ಪ್ರಮಣಿಕ್  ಮಗುವನ್ನು ಆಕೆಯ ಮನೆಯಲ್ಲಿ ಬಿಟ್ಟಿದ್ದಾನೆ."ಮಗು ಅಳುತ್ತಲೇ ಇರುವುದನ್ನು ಪೋಷಕರು ಗಮನಿಸಿದ್ದಾರೆ. ಪ್ರಾರಂಭದಲ್ಲಿ ಮಗುವಿಗೆ ಆರೋಗ್ಯ ಸಮಸ್ಯೆ ಇರಬಹುದಾಗಿ ಶಂಕಿಸಿದ್ದಾರೆ. ಆದಾಗ್ಯೂ, ಅವರು ಅವಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ, ಬಾಲಕಿಯ ಮೈನಿಂದ ರಕ್ತಸ್ರಾವವಾಗುತ್ತಿದ್ದದ್ದು ಕಂಡಿದೆ. ಆಗ ಪೋಷಕರು ಪಕ್ಕದ ಮನೆಯಲ್ಲಿದ್ದ ಆರೋಪಿ ಪ್ರಮಣಿಕ್  ಮನೆಗೆ ತೆರಳಿದಾಗ ಆತ ಅಲ್ಲಿರಲಿಲ್ಲ. ಇದರಿಂದ ಅನುಮಾನಗೊಂಡ ಅವರು ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ. 

ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೋಲೀಸರು ಅಪರಾಧಿಯನ್ನು ಬಂಧಿಸಿದ್ದಾರೆ. "ನಾವು ಮಗುವನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಿದ್ದೇವೆ, ಅಲ್ಲಿ ಅವರು ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಹೇಳೀದ್ದಾರೆ.ಆದರೆ ಈ ಸಂಬಂಧ ವೈದ್ಯರಿಂದ ಲಿಖಿತ ವರದಿಯನ್ನು ನಾವು ಇನ್ನೂ ಸ್ವೀಕರಿಸಿಲ್ಲ" ಪೋಲೀಸರು ಮಾಹಿತಿ ಒದಗಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಪೊಲೀಸರು ದಾಖಲಿಸಿರುವ 90% ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರ್ಸಥೆಯ ಹತ್ತಿರದ ಸಂಬಂಧಿ ಅಥವಾ ಸ್ನೇಹಿತರೇ ಆಕೆಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ವರದಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT