ದೇಶ

ಜಾರ್ಖಂಡ್ ವಿಧಾನಸಭೆ: ಎರಡನೇ ಹಂತದ ಮತದಾನ ಪ್ರಗತಿಯಲ್ಲಿ 

Sumana Upadhyaya

ಜಮ್ಷೆಡ್ ಪುರ: ಜಾರ್ಖಂಡ್ ವಿಧಾನಸಭೆಯ ಎರಡನೇ ಹಂತದ ಮತದಾನ ಶನಿವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು ಮತದಾರರು ಮತಗಟ್ಟೆಗಳ ಹೊರಗೆ ಸಾಲಾಗಿ ನಿಂತು ತಮ್ಮ ಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ. 


ಐದು ಹಂತಗಳಲ್ಲಿ ನಡೆಯುವ ಜಾರ್ಖಂಡ್ ವಿಧಾನಸಭಾ ಕ್ಷೇತ್ರಗಳ ಮತದಾನ ಪೈಕಿ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು ಜಮ್ಷೆಡ್ ಪುರ ಪೂರ್ವ ಮತ್ತು ಪಶ್ಚಿಮ ಕ್ಷೇತ್ರ ಸೇರಿದಂತೆ 20 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.ಇಂದಿನ ಮತದಾನ ಕಾರ್ಯದಲ್ಲಿ ಸುಮಾರು 48 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.


ಭದ್ರತಾ ಕಾರಣಗಳಿಗಾಗಿ ಇಂದು 18 ಕ್ಷೇತ್ರಗಳಲ್ಲಿ ಅಪರಾಹ್ನ 3 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಲಿದೆ. ಇನ್ನು ಜಮ್ಷೆಡ್ ಪುರ ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳಲ್ಲಿ ಮತದಾರರು ಸಂಜೆ 5 ಗಂಟೆಯೊಳಗೆ ಬಂದು ಮತದಾನ ಮಾಡಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿನಯ್ ಕುಮಾರ್ ಚೌಬೆ ತಿಳಿಸಿದ್ದಾರೆ.


ಮಾವೋವಾದಿ ಪೀಡಿತ ಕ್ಷೇತ್ರಗಳಲ್ಲಿ ಭದ್ರತೆಗೆ ಸಿಎಪಿಎಫ್, ಸಿಆರ್ ಪಿಎಫ್ ಮತ್ತು ಬಿಎಸ್ಎಫ್ ಜವಾನರು, ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಾರ್ಖಂಡ್ ವಿಧಾನಸಭೆಯ ಫಲಿತಾಂಶ ಇದೇ 23ರಂದು ಪ್ರಕಟವಾಗಲಿದೆ.

SCROLL FOR NEXT