ಪ್ರಹ್ಲಾದ್ ಜೋಷಿ 
ದೇಶ

ದೇಶ, ಈಶಾನ್ಯ ರಾಜ್ಯಗಳ ಹಿತಾಸಕ್ತಿಗಾಗಿ ಪೌರತ್ವ ಮಸೂದೆ ಮಂಡನೆ: ಪ್ರಹ್ಲಾದ್ ಜೋಷಿ

ರಾಷ್ಟ್ರ ಹಾಗೂ ಈಶಾನ್ಯ ರಾಜ್ಯಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪೌರತ್ವ ಮಸೂದೆಯನ್ನು ಮಂಡನೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರು ಸೋಮವಾರ ಹೇಳಿದ್ದಾರೆ. 

ನವದೆಹಲಿ: ರಾಷ್ಟ್ರ ಹಾಗೂ ಈಶಾನ್ಯ ರಾಜ್ಯಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪೌರತ್ವ ಮಸೂದೆಯನ್ನು ಮಂಡನೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರು ಸೋಮವಾರ ಹೇಳಿದ್ದಾರೆ. 

ನೆರೆ ದೇಶಗಳಲ್ಲಿನ ಧಾರ್ಮಿಕ ಕಿರುಕುಳಗಳಿಗೆ ಹೆದರಿ, ಅಲ್ಲಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತಕರರಿಗೆ ಭಾರತೀಯ ಪೌರತ್ವ ನೀಡುವ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಲಿದೆ. 60 ವರ್ಷದಷ್ಟು ಹಳೆಯದಾದ ಈ ಮಸೂದೆಯ ತಿದ್ದುಪಡಿಗೆ ಇಂದು ಮಧ್ಯಾಹ್ನ ಗೃಹ ಸಚಿವ ಅಮಿತ್ ಶಾ ಅವರು ಮಸೂದೆ ಮಂಡಿಸಲಿದ್ದಾರೆ. ನಂತರ ಈ ಮಸೂದೆ ಕುರಿತು ಉಭಯ ಸದನಗಳಲ್ಲಿ ಚರ್ಚೆ ನಡೆಯಲಿದೆ. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಹ್ಲಾದ್ ಜೋಷಿಯವರು, ಮಸೂದೆಯು ದೇಶ ಹಾಗೂ ಈಶಾನ್ಯ ರಾಜ್ಯಗಳ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದೆ. ಮಸೂದೆ ಎರಡೂ ಸದನದಗಳಿಂದ ಒಪ್ಪಿಗೆ ಪಡೆದುಕೊಳ್ಳಲಿದೆ. ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಸೂದೆಯನ್ನು ಮಂಡಿಸಲಾಗುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

I-PAC ಮೇಲೆ ಇಡಿ ದಾಳಿ ಖಂಡಿಸಿ ಅಮಿತ್ ಶಾ ಕಚೇರಿ ಹೊರಗೆ ಪ್ರತಿಭಟನೆ: ಟಿಎಂಸಿ ಸಂಸದರ ಬಂಧನ; Video

KGF 2, ಪುಷ್ಪ 2 ದಾಖಲೆಗಳು ಉಡೀಸ್: 24 ಗಂಟೆಗಳಲ್ಲಿ 220ಕ್ಕೂ ಹೆಚ್ಚು ಮಿಲಿಯನ್ ವೀಕ್ಷಣೆ ಪಡೆದ ಯಶ್‌ರ Toxic Teaser!

ಬದಲಾದ ಸಮೀಕರಣ: ಸರ್ಕಾರಿ ಒಪ್ಪಂದಗಳಿಗೆ ಬಿಡ್ ಮಾಡುವ ಚೀನೀ ಸಂಸ್ಥೆಗಳ ಮೇಲಿನ ನಿರ್ಬಂಧ ರದ್ದತಿಗೆ ಭಾರತ ಮುಂದು!

ಜೀವ ಬೆದರಿಕೆ ಮೂಲಕ ನನ್ನನ್ನು ತಡೆಯಲು ಸಾಧ್ಯವಿಲ್ಲ, ಬಂಗಾಳಕ್ಕಾಗಿ ಪ್ರಾಣ ತ್ಯಜಿಸಲು ಸಿದ್ಧ: ಗವರ್ನರ್ ಬೋಸ್

ಪಕ್ಷಗಳು ತತ್ವ-ಸಿದ್ಧಾಂತ ಮರೆತಿವೆ; ಭೀತಿ ಹುಟ್ಟಿಸಿ, ಹಣದಿಂದ ನಾಯಕರನ್ನು ಖರೀದಿಸುತ್ತಿವೆ: ಬಿಜೆಪಿ ವಿರುದ್ಧ ಅಜಿತ್ ಪವಾರ್ ವಾಗ್ದಾಳಿ

SCROLL FOR NEXT