ದೇಶ

ತಮ್ಮವನಲ್ಲದ ಚಾಲಕನೊಡನೆ ಕ್ಯಾಬ್ ಸವಾರಿ: ಪೌರತ್ವ ಮಸೂದೆ ಕುರಿತು ಸಿಬಲ್ ಟ್ವೀಟ್

Raghavendra Adiga

ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆ ಎನ್ನುವುದು ತಮ್ಮವನಲ್ಲದ ಚಾಲಕನೊಡನೆ ಕ್ಯಾಬ್ ಸವಾರಿ ಮಾಡಿದಂತಿರಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್  ಹೇಳಿದ್ದಾರೆ. ಅವರು ಮಸೂದೆ ಸಂಬಂಧ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಪೌರತ್ವ (ತಿದ್ದುಪಡಿ) ಮಸೂದೆ (ಸಿಎಬಿ) ಅಲ್ಲಿನ ಧಾರ್ಮಿಕ ಕಿರುಕುಳ ಎದುರಿಸುತ್ತಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲು ಪ್ರಯತ್ನಿಸುತ್ತದೆ.

ದೇಶದ ಸಂವಿಧಾನ ಮತ್ತು ಅದರ ಜಾತ್ಯತೀತ ನೀತಿಗಳಿಗೆ ವಿರುದ್ಧವಾಗಿರುವುದರಿಂದ ಸಂಸತ್ತಿನಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸಾರಾ ಸಗಟಾಗಿ ವಿರೋಧಿಸುವುದಾಗಿ  ಕಾಂಗ್ರೆಸ್ ಹೇಳಿದೆ. "ಸಿಎಬಿ ಒಂದು ವಿಚಿತ್ರ ಮಸೂದೆಯಾಗಿದ್ದು ಇದು ತಮ್ಮವನಲ್ಲದ ಚಾಲಕನೊಡನೆ ನಡೆಸುವ ಕ್ಯಾಬ್ ಸವಾರಿಯಾಗಿದೆ.ರಾಜಕೀಯ ಮತ್ತು ಲಾಭಾಂಶವನ್ನಷ್ಟೇ ಗಮನದಲ್ಲಿಟ್ಟು ಸಾಮಾಜಿಕ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು  ಅಸ್ಥಿರಗೊಳಿಸಿ, ನಾಶಮಾಡುವ ಮಸೂದೆ ಇದಾಗಿದೆ.ಹಾಥ್ ಮಿಲಾವೋ ದೇಶ್ ಬಚಾವೋ (ಕೈ ಜೋಡಿಸಿ ದೇಶ ಉಳಿಸಿ)" ಸಿಬಲ್ ಟ್ವೀಟ್ ನಲ್ಲಿ ಹೇಳಿದ್ದಾರೆ.

ಆರು ದಶಕಗಳಷ್ಟು ಹಳೆಯದಾದ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಸೋಮವಾರ ಮಧ್ಯಾಹ್ನ ಸಂಸತ್ತಿನಲ್ಲಿ ಮಂಡನೆಯಾಗಲಿದೆ.

SCROLL FOR NEXT