ದೇಶ

ಸುದೀರ್ಘ ಚರ್ಚೆಯ ನಂತರ ಲೋಕಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಅಂಗೀಕಾರ

Srinivas Rao BV

ನವದೆಹಲಿ: ಸುದೀರ್ಘ ಚರ್ಚೆಯ ನಂತರ ಲೋಕಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಅಂಗೀಕಾರಗೊಂಡಿದೆ. 

ಡಿ.09 ರಂದು ಬೆಳಿಗ್ಗೆ ಅಮಿತ್ ಶಾ ಸಂಸತ್ ನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿದ್ದರು. ಸಚಿವರು ಮಸೂದೆಯನ್ನು ಮಂಡಿಸುತ್ತಿದ್ದಂತೆ ಸದನದಲ್ಲಿ ತೀವ್ರ ಗದ್ದಲ, ಕೋಲಾಹಲ ಉಂಟಾಗಿತ್ತು. ಈ ಬಳಿಕ ಸುದೀರ್ಘ ಚರ್ಚೆ ನಡೆದು ಮಧ್ಯರಾತ್ರಿ ವೇಳೆಗೆ ಮಸೂದೆ ಅಂಗೀಕಾರಗೊಂಡಿದೆ. 

ಸದನದಲ್ಲಿ ಒಟ್ಟಾರೆ ಹಾಜರಿದ್ದ 391 ಸದಸ್ಯರ ಪೈಕಿ 311 ಸದಸ್ಯರು ಮಸೂದೆಯ ಪರವಾಗಿ ಮತ ಹಾಕಿದರೆ 80 ಸದಸ್ಯರು ವಿರುದ್ಧವಾಗಿ ಮತಚಲಾವಣೆ ಮಾಡಿದರು.  ಮಸೂದೆ ಸಂಬಂಧ ಲೋಕಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. ಪೌರತ್ವ ಮಸೂದೆಯನ್ನು ವಿರೋಧಿಸಿದ ಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಒಂದು ಹಂತದಲ್ಲಿ ಮಸೂದೆಯ ಪ್ರತಿಯನ್ನು ಹರಿದುಹಾಕಿ ತಮ್ಮ ವಿರೋಧ ವ್ಯಕ್ತಪಡಿಸಿದರು.

ಮಸೂದೆ ಅಂಗೀಕಾರದ ಬಗ್ಗೆ ಪ್ರಧಾನಿ ಟ್ವೀಟ್ ಮಾಡಿದ್ದು ಮಸೂದೆಯನ್ನು ವಿವರಿಸಿ ಸದಸ್ಯರ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಿರುವ, ಅನುಮಾನಗಳನ್ನು ಪರಿಹರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. 

SCROLL FOR NEXT