ದೇಶ

“ನಿರ್ಭಯ” ಅತ್ಯಾಚಾರ ಪ್ರಕರಣ; ನಾಲ್ವರು  ಅಪರಾಧಿಗಳಿಗೆ, ಡಿ. 16 ರಂದು  ಗಲ್ಲು ಶಿಕ್ಷೆ

Shilpa D

ನವದೆಹಲಿ:  ದೇಶಾದ್ಯಂತ  ಸಂಚಲನ  ಸೃಷ್ಟಿಸಿದ  “ನಿರ್ಭಯ” ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ  ಮರಣದಂಡನೆಯ  ವಿಧಿಸುವ  ದಿನ  ನಿಗದಿಯಾಗಿದೆ.  ಈ  ತಿಂಗಳ  ೧೬ರ   ಸೋಮವಾರ ಮುಂಜಾನೆ ೫ ಗಂಟೆಗೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದು  ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಸಂಬಂಧ  ಸೋಮವಾರ ಕೇಂದ್ರ ಸರ್ಕಾರದಿಂದ ಆದೇಶಗಳು ತಲುಪಿವೆ  ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ  ಅಪರಾಧಿಗಳನ್ನು  ಇರಿಸಿರುವ   ತಿಹಾರ್ ಜೈಲಿನಲ್ಲಿ ಅವರನ್ನು ಗಲ್ಲಿಗೇರಿಸಲಾಗುವುದು.ಜೈಲು ಅಧಿಕಾರಿಗಳು ಇದಕ್ಕಾಗಿ ಸೂಕ್ತ  ವ್ಯವಸ್ಥೆ ಮಾಡಿದ್ದಾರೆ.

ಅಪರಾಧಿಗಳ ಪೈಕಿ  ಒಬ್ಬನಾಗಿರುವ ವಿನಯ್ ಶರ್ಮಾ ರಾಷ್ಟ್ರಪತಿಗೆ ಕ್ಷಮಾಧಾನ ಕೋರಿ ಆರ್ಜಿ  ಸಲ್ಲಿಸಿದ್ದ, ಆದರೆ,   ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆರ್ಜಿಯನ್ನು ತಿರಸ್ಕರಿಸುವ ಮೂಲಕ  ಶಿಕ್ಷೆ ಜಾರಿಗೆ  ಹಸಿರು ನಿಶಾನೆ ತೋರಿಸಿದ್ದರು. 

ಡಿಸೆಂಬರ್ ೧೬, ೨೦೧೨ ರಂದು,  ದೆಹಲಿಯಲ್ಲಿ  ಆರು ಮಂದಿ ಸೇರಿ  ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ  ನಡೆಸಿದ್ದರು.  ಈ ಪೈಕಿ  ನಾಲ್ವರಿಗೆ  ಡಿಸೆಂಬರ್ ೧೬ ಗಲ್ಲಿಗೇರಿಸಲಿರುವುದು ವಿಶೇಷವಾಗಿದೆ.   ಅಪರಾಧಿಗಳಲ್ಲಿ ಓರ್ವ ಬಾಲಾಪರಾಧಿಯಾಗಿದ್ದು, ಆತ ಈಗ  ಬಂಧನದಲ್ಲಿದ್ದಾನೆ.   ಮತ್ತೊಬ್ಬ   ಅಪರಾಧಿ ರಾಮ್‌ಸಿಂಗ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಅಲ್ಲದೆ,  ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ  “ದಿಶಾ” ಅತ್ಯಾಚಾರ  ಆರೋಪಿಗಳ ಮೇಲೆ ಪೊಲೀಸರು ಎನ್ ಕೌಂಟರ್  ನಡೆಸಿದ ನಂತರ, ದೇಶದ   ಜನರ ದೃಷ್ಟಿ ನಿರ್ಭಯ  ಘಟನೆಯ ದೋಷಿಗಳ ಮೇಲೆ ಹರಿದಿತ್ತು. ಘಟನೆ ನಡೆದ ಏಳು ವರ್ಷಗಳ ನಂತರ, ಮಹಿಳಾ ಸಂಘಗಳು ಸೇರಿದಂತೆ ಅನೇಕ ಗಣ್ಯರು  ಅಪರಾಧಿಗಳಿಗೆ ಏಕೆ  ಮರಣದಂಡನೆ ಜಾರಿಗೊಳಿಸುತ್ತಿಲ್ಲ?  ಎಂದು ಪ್ರಶ್ನಿಸುತ್ತಿದ್ದರು.  

ಶಿಕ್ಷೆ ಜಾರಿಗೊಳಿಸದಿರುವ  ಬಗ್ಗೆ  ನಿರ್ಭಯಾ ಅವರ ತಾಯಿ ಸಹ ಆಕ್ರೋಶ ವ್ಯಕ್ತಪಡಿಸಿದ್ದರು. ಜೈಲು ಅಧಿಕಾರಿಗಳು  ಕೈಗೊಂಡ  ನಿರ್ಧಾರ ಅವರ ಬೇಡಿಕೆಯನ್ನು  ಈಡೇರಿಸಿದಂತಾಗಲಿದೆ.

SCROLL FOR NEXT