ದೇಶ

ಶಿಷ್ಟಾಚಾರ ಮರೆತು 12 ವರ್ಷಗಳ ನಂತರ ಸ್ನೇಹಿತನನ್ನು ಭೇಟಿ ಮಾಡಿದ ರಾಷ್ಟ್ರಪತಿ ಕೋವಿಂದ್

Lingaraj Badiger

ಭುವನೇಶ್ವರ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾನುವಾರ ಶಿಷ್ಟಾಚಾರ ಮರೆತು 12 ವರ್ಷಗಳ ನಂತರ ತಮ್ಮ ಸ್ನೇಹಿತನನ್ನು ಭೇಟಿ ಮಾಡುವ ಮೂಲಕ ಸರಳತೆ ಮೆರೆದಿದ್ದಾರೆ.

ಉತ್ಕಲ ವಿಶ್ವವಿದ್ಯಾಲಯದ ಅಮೃತ ಮೋಹತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಕಾರ್ಯಕ್ರಮದ ನಂತರ ರಾಮನಾಥ್ ಕೋವಿಂದ್ ಅವರು ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ತಮ್ಮ ಸ್ನೇಹಿತ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಬೀರಭದ್ರ ಸಿಂಗ್ ಅವರನ್ನು ಕರೆದು ಮಾತನಾಡಿಸಿದ್ದಾರೆ. 

ಉಭಯ ಕುಶಲೋಪರಿ ವಿಚಾರಿಸಿದ ನಂತರ ರಾಷ್ಟ್ರಪತಿಗಳು ತಮ್ಮ ಸ್ನೇಹಿತನೊಂದಿಗೆ ಫೋಟೋ ಸಹ ತೆಗೆಸಿಕೊಂಡಿದ್ದಾರೆ.

ರಾಷ್ಟ್ರಪತಿಗಳ ಆತಿಥ್ಯಕ್ಕೆ ಅಚ್ಚರಿ ವ್ಯಕ್ತಪಡಿಸಿದ ಸಿಂಗ್, ನಾನು 12 ವರ್ಷಗಳ ನಂತರ ಅವರನ್ನು ಭೇಟಿ ಮಾಡಿದೆ. 2000 ರಿಂದ 2006ರ ವರೆಗೆ ನಾವು ಇಬ್ಬರು ರಾಜ್ಯಸಭಾ ಸದಸ್ಯರಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾವು ಇಬ್ಬರು ಎಸ್ ಸಿ/ಎಸ್ ಟಿ ಸಮಿತಿಯ ಸದಸ್ಯರಾಗಿ ಸುಮಾರು 2 ವರ್ಷಗಳ ಕಾಲ ಕೆಲಸ ಮಾಡಿದ್ದೇವೆ ಎಂದರು.

ಕಾರ್ಯಕ್ರಮವೊಂದರಲ್ಲಿ ನಾನು ರಾಷ್ಟ್ರಪತಿಗಳಿಗೆ ಪುಷ್ಪಗುಚ್ಚ ನೀಡಿ ಶುಭ ಕೋರಿ ಬಯಸಿದ್ದೆ. ಆದರೆ ಭದ್ರತಾ ಸಿಬ್ಬಂದಿ ನನಗೆ ಬಿಡಲಿಲ್ಲ. ಆದರೆ ಈಗ ಅವರೇ ಕರೆ ಮಾತನಾಡಿಸಿರುವುದಕ್ಕೆ ಖುಷಿಯಾಗಿದೆ ಮತ್ತು ರಾಷ್ಟ್ರಪತಿ ಭವನಕ್ಕೆ ಬರುವಂತೆ ಆಹ್ವಾನಿಸಿರುವುದಾಗಿ ಸಿಂಗ್ ತಿಳಿಸಿದ್ದಾರೆ.

SCROLL FOR NEXT