ದೇಶ

ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಾವು ಪ್ರಕರಣ: 7 ಪೊಲೀಸರ ಅಮಾನತು 

Shilpa D

ಲಕ್ನೋ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಆರೋಪಿಗಳೇ ಬೆಂಕಿ ಹಚ್ಚಿ ಕೊಂದ ಘಟನೆ ಸಂಬಂಧ ಏಳು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. 

ಸಂತ್ರಸ್ತೆಗೆ ರಕ್ಷಣೆ ಕೊಡಲು ಕರ್ತವ್ಯ ಲೋಪ ತೋರಿದ ಆರೋಪದ ಮೇಲೆ ಉತ್ತರ ಪ್ರದೇಶ ಸರ್ಕಾರ ಈ ಏಳು ಪೊಲೀಸರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ

ಕರ್ತವ್ಯ ಲೋಪ ತೋರಿದ್ದಕ್ಕೆ ಉನ್ನಾವ್​ನ ಬಿಹಾರ್ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ತ್ರಿಪಾಠಿ ಹಾಗೂ ಇತರ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ ಎಂದು ಉ.ಪ್ರ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಾಸ್ತಿ ತಿಳಿಸಿದ್ದಾರೆ.

23 ವರ್ಷದ ರೇಪ್ ಸಂತ್ರಸ್ತೆಯು ನ್ಯಾಯಾಲಯಕ್ಕೆ ಹೋಗಿ ಬರುವಾಗ ಐದು ಜನರು ಹಲ್ಲೆ ಎಸಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಬೆಂಕಿ ಜ್ವಾಲೆ ಮೈ ಸುಡುತ್ತಿರುವಂತೆಯೇ ಆಕೆ ಒಂದು ಕಿಲೋಮೀಟರ್​ವರೆಗೂ ಹೋಗಿ ಪೊಲೀಸರ ಸಹಾಯ ಪಡೆದಿದ್ದಳು.

ಆದರೆ, ಬದುಕಲು ಬಹಳ ಕಷ್ಟಪಟ್ಟ ಆ ಮಹಿಳೆ ಜೀವನ್ಮರಣ ಹೋರಾಟದಲ್ಲಿ ಸಾವನ್ನಪ್ಪಿದರು. ಆಕೆಯ ದೇಹದ ಶೇ. 90 ಭಾಗ ಸುಟ್ಟು ಹೋಗಿತ್ತು. 

SCROLL FOR NEXT