ದೇಶ

ಪೌರತ್ವ ಮಸೂದೆಗೆ ಲೋಕಸಭೆ ಅಸ್ತು: ಗೃಹ ಸಚಿವ ಅಮಿತ್ ಶಾ ಕೊಂಡಾಡಿದ ಪ್ರಧಾನಿ ಮೋದಿ

Manjula VN

ನವದೆಹಲಿ: ವಿವಾದಿತ ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅನುಮೋದನೆ ನೀಡಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹರ್ಷ ವ್ಯಕ್ತಪಡಿಸಿದ್ದು, ಗೃಹ ಸಚಿವ ಅಮಿತ್ ಶಾ ಅವರನ್ನು ಕೊಂಡಾಡಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ವ್ಯಾಪಕ ಚರ್ಚೆ ಮೂಲಕ ರಾಷ್ಟ್ರೀಯ ಪೌರತ್ವ (ತಿದ್ದುಪಡಿ)ಮಸೂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದ್ದು, ಸಾಕಷ್ಟು ಸಂತೋಷವನ್ನು ತಂದಿದೆ ಎಂದು ಹೇಳಿದ್ದಾರೆ. 

ಸದನದಲ್ಲಿದ್ದ ಸಾಕಷ್ಟು ಸಂಸದರು ಹಾಗೂ ಪಕ್ಷಗಳು ಮಸೂದೆಗೆ ಬೆಂಬಲವನ್ನು ವ್ಯಕ್ತಪಡಿಸಿವೆ ಎಂದೆನಿಸುತ್ತಿದೆ. ಮಸೂದೆಯು ಭಾರತದ ಶತಮಾನಗಳಷ್ಟು ಹಳೆಯದಾದ ನೈತಿಕತೆ ಮತ್ತು ಮಾನವೀಲಯ ಮೌಲ್ಯಗಳ ನಂಬಿಕೆಗೆ ಅನುಗುಣವಾಗಿದೆ ಎಂದು ತಿಳಿಸಿದ್ದಾರೆ. 

ಇದಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಧಾನಿ ಮೋದಿಯವರು ಇದೇ ವೇಳೆ ಕೊಂಡಾಡಿದ್ದಾರೆ. 

ಸದನದಲ್ಲಿ ಮಸೂದೆಯನ್ನು ಮಂಡಿಸಿದ ಅಮಿತ್ ಶಾ ಅವರು, ಚರ್ಚೆ ವೇಳೆ ಮಸೂದೆ ಕುರಿತು ಸಂಸದರಿಗೆ ಎಲ್ಲಾ ರೀತಿಯ ಆಯಾಮಗಳ ಕುರಿತು ವಿವರಿಸಿದರು. ಮಸೂದೆ ಕುರಿತು ವಿವರಣೆ ನೀಡಿದ ಗೃಹ ಸಚಿವ ಅಮಿತ್ ಶಾ ಅವರಿಗೆ ವಿಶೇಷವಾಗಿ ಶ್ಲಾಘಿಸುತ್ತೇನೆ. ಲೋಕಸಭೆಯಲ್ಲಿ ಸಂಸದರು ಎತ್ತಿದ್ದ ಪ್ರತೀ ಪ್ರಶ್ನೆಗೂ ವಿವರಣಾತ್ಮಕಾಗಿ ಅಮಿತ್ ಶಾ ಅವರು ಉತ್ತರಿಸಿದ್ದರು ಎಂದಿದ್ದಾರೆ.

SCROLL FOR NEXT