ದೇಶ

ಹೈದರಾಬಾದ್ ಎನ್ಕೌಂಟರ್: ಡಿ.13ರವರೆಗೂ ಮೃತದೇಹಗಳ ರಕ್ಷಿಸಿ- ಪೊಲೀಸರಿಗೆ 'ಹೈ' ಸೂಚನೆ

Manjula VN

ಹೈದರಾಬಾದ್: ಪೊಲೀಸರ ಎನ್'ಕೌಂಟರ್'ನಲ್ಲಿ ಹತ್ಯೆಯಾದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಶವಗಳನ್ನು ಡಿ.13ರವರೆಗೂ ರಕ್ಷಣೆ ಮಾಡುವಂತೆ ಪೊಲೀಸರಿಗೆ ಹೈದರಬಾದ್ ಹೈಕೋರ್ಟ್ ಸೂಚನೆ ನೀಡಿದೆ. 

ಆರೋಪಿಗಳ ಮೇಲೆ ಪೊಲೀಸರು ನಡೆಸಿದ ಎನ್'ಕೌಂಟರ್ ವಿರುದ್ಧ ಕೆಲ ದಿನಗಳ ಹಿಂದಷ್ಟೇ ನ್ಯಾಯಾಲಯದಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿದ್ದವು. 

ಈ ಅರ್ಜಿಯನ್ನು ಪರಿಶೀಲನೆ ನಡೆಸಿರುವ ನ್ಯಾಯಾಲಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದು, ಡಿ.13ರವರೆಗೂ ಆರೋಪಿಗಳ ಮೃತದೇಹಗಳನ್ನು ರಕ್ಷಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. 

ಈ ನಡುವೆ ಮೃತದೇಹಗಳನ್ನು ರಕ್ಷಣೆ ಮಾಡುವ ಸೌಲಭ್ಯಗಳು ಮಹಬೂಬ್ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಇಲ್ಲದ ಕಾರಣ ಏರ್ ಆ್ಯಂಬುಲೆನ್ಸ್ ಮೂಲಕ ಮೃತದೇಹಗಳನ್ನು ಹೈದರಾಬಾದ್ ನಗರದ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚನೆ ನ್ಯಾಯಾಲಯ ಸೂಚನೆ ನೀಡಿದೆ. 

ಇದಲ್ಲದೆ, ಎನ್'ಕೌಂಟರ್ ವೇಳೆ ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ಸೂಚನೆಗಳನ್ನು ಪೊಲೀಸರು ಅನುಸರಿಸಿದ್ದಾರೆಯೇ ಎಂಬದರ ಕುರಿತು ಸಾಕ್ಷ್ಯಗಳನ್ನು ಒದಗಿಸುವಂತೆಯೂ ರಾಜ್ಯ ಸರ್ಕಾರದ ಪರ ವಕೀಲರಿಗೆ ಸೂಚಿಸಿದೆ. 

SCROLL FOR NEXT