ದೇಶ

2002 ಗುಜರಾತ್ ಗಲಭೆ ಪ್ರಕರಣ: ನಾನಾವತಿ ಆಯೋಗದಿಂದ ಪ್ರಧಾನಿ ಮೋದಿಗೆ ಕ್ಲೀನ್'ಚಿಟ್

Manjula VN

ಗಾಂಧಿನಗರ: 2002 ಗುಜರಾತ್ ಗಲಭೆ ಪ್ರಕರಕ್ಕೆ ಸಂಬಂಧಿಸಿದಂತೆ ಗುಜರಾತ್ ರಾಜ್ಯದ ಅಂದಿನ ನರೇಂದ್ರ ಮೋದಿ ಸರ್ಕಾರಕ್ಕೆ ನಾನಾವತಿ ಆಯೋಗ ಕ್ಲೀನ್'ಚಿಟ್ ನೀಡಿದೆ. 

ಗಲಭೆ ಪ್ರಕರಣ ಕುರಿತು ನಾನಾವತಿ ಆಯೋಗ ಸಿದ್ಧಪಡಿಸಿರುವ ವರದಿಯನ್ನು ಗುಜರಾತ್ ರಾಜ್ಯದ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ಅವರು ರಾಜ್ಯ ವಿಧಾನಸಭೆಯಲ್ಲಿ ಮಂಡನೆ ಮಾಡಿದ್ದಾರೆ. 

ವರದಿಯಲ್ಲಿ ದಂಗೆ ಪ್ರಕರಣದಲ್ಲಿ ಸರ್ಕಾರದ ಪಾತ್ರವಿಲ್ಲ. ದಂಗೆ ಕುರಿತು ಸಂಜೀವ್ ಭಟ್ ಸುಳ್ಳು ಹೇಳಿದ್ದಾರೆ. ಇದು ಪೂರ್ವನಿಯೋಜಿತ ಗಲಭೆಯಲ್ಲ. ದಂಗೆಯನ್ನು ನಿಯಂತ್ರಿಸಲು ಮೋದಿಯವರು ಯತ್ನ ನಡೆಸಿದ್ದರು ಎಂದು ನಾನಾವತಿ ಆಯೋಗ ತಿಳಿಸಿದ್ದು, ಈ ಮೂಲಕ ಪ್ರಕರಣ ಸಂಬಂಧ ಮೋದಿ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದೆ. 

ಈ ಹಿಂದೆ ನಾನಾವತಿ ಆಯೋಗದ ವರದಿಯನ್ನು 2008ರಲ್ಲಿ ಮೊದಲ ಬಾರಿಗೆ ಮಂಡನೆ ಮಾಡಲಾಗಿತ್ತು. ಮೊದಲ ವರದಿಯಲ್ಲಿ ರೈಲಿಗೆ ಬೆಂಕಿ ಹೊತ್ತಿಕೊಂಡಿದ್ದರ ಬಗ್ಗೆ ತಿಳಿಸಲಾಗಿತ್ತು. ಇದೊಂದು ಯೋಜಿತ ಪಿತೂರಿಯಾಗಿದ್ದು,  ಗೋದ್ರಾ ರೈಲ್ವೇ ಸಮೀಪದಲ್ಲಿ ಸಬರಮತಿ ಏಕ್ಸ್'ಪ್ರೆಸ್ ರೈಲಿನ 5-6 ಬೋಗಿಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ತಿಳಿಸಲಾಗಿತ್ತು. ಇದಾದ ಬಳಿಕ ಅಂತಿಮ ವರದಿಯನ್ನು 2014ರಲ್ಲಿ ಆನಂದಿ ಬೆನ್ ನೇತೃತ್ವದ ಸರ್ಕಾರದ ಎದುರು ಮಂಡನೆ ಮಾಜಲಾಗಿತ್ತು. ಅಧಿಕೃತ ಮಾಹಿತಿಗಳ ಪ್ರಕಾರ, ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 1000ಕ್ಕೂ ಹೆಚ್ಚು ಜನರು ಗಲಭೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಅನಧಿಕೃತವಾಗಿ ಈ ಸಾವಿನ ಸಂಖ್ಯೆ ಇದಕ್ಕೂ ಹೆಚ್ಚು ಎಂದು ಹೇಳಲಾಗುತ್ತಿದೆ. 

ಗಲಭೆ ಪ್ರಕರಣ ಕುರಿತು 2002ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ತನಿಖೆಗೆ ಆಯೋಗವನ್ನು ರಚನೆ ಮಾಡಿತ್ತು. 

SCROLL FOR NEXT