ದೇಶ

ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಭೀಮ್ ಆರ್ಮಿ ಮುಖ್ಯಸ್ಥ ಅಜಾದ್ ಘೋಷಣೆ

Nagaraja AB

ನವ ದೆಹಲಿ: ದಲಿತ ಸಮುದಾಯದ ಆಶೋತ್ತರಗಳಿಗನುಗುಣವಾಗಿ ಹೊಸ ರಾಜಕೀಯ ಸ್ಥಾಪಿಸುವುದಾಗಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಹೇಳಿದ್ದಾರೆ.ಈ ಪಕ್ಷ ಬಹುಜನ ಸಮಾಜಕ್ಕೆ ಹೊಸ ರಾಜಕೀಯ ಆಯ್ಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. 

ಪ್ರಾಮಾಣಿಕ, ದಕ್ಷತೆಯಿಂದ ಸಮಾಜಕ್ಕೆ ಕೊಡುಗೆ ನೀಡಲು ಬಯಸುವ ಯುವಕರು ಪಕ್ಷ ಸೇರ್ಪಡೆಯಾಗುವಂತೆ ಅವರು ಮನವಿ ಮಾಡಿದ್ದಾರೆ. ಈಗ ಕೆಲಸ ಮಾಡುವವರು ರಾಜಕಾರಣಿಗಳಾಗುತ್ತಾರೆ ಹೊರತು ಹಣ ಹೊಂದಿದವರಲ್ಲ   ಎಂದು ಟ್ವೀಟ್ ಮಾಡಿದ್ದು, ಹೊಸ ಪಕ್ಷಕ್ಕೆ ಹೆಸರು ನೀಡುವಂತೆ ಬೆಂಬಲಿಗರನ್ನು ಕೋರಿದ್ದಾರೆ.

ಹೊಸ ರಾಜಕೀಯ ಪಕ್ಷ ಸ್ಥಾಪನೆ ಆಯ್ಕೆ ಮಾಡಲು ನಿರ್ಧರಿಸಿದ್ದಾಗ ನನ್ನಗೆ ಹೊಸ ಭಾವನಾತ್ಮಕ ಕ್ಷಣ ಅನಿಸಿತು ಎಂದಿದ್ದಾರೆ.ಲೋಕಸಭಾ ಚುನಾವಣೆ ವೇಳೆಯಲ್ಲಿ ಅಜಾದ್ ಬಿಜೆಪಿಯ  ಏಜೆಂಟ್ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದರು. 

SCROLL FOR NEXT