ಜೀತೇಂದ್ರ ಸಿಂಗ್ 
ದೇಶ

50 ಪೈಸೆಗಾಗಿ ವ್ಯಕ್ತಿಯೊಬ್ಬರಿಗೆ ನೋಟಿಸ್ ನೀಡಿದ ರಾಜಸ್ಥಾನ ಬ್ಯಾಂಕ್!

ರಾಜಸ್ತಾನದ ಜುಂಜುನು ಜಿಲ್ಲೆಯಲ್ಲಿ ಸಾರ್ವಜನಿಕ ಬ್ಯಾಂಕ್ ವೊಂದು  50 ಪೈಸೆ ಮರುಪಾವತಿಸುವಂತೆ  ವ್ಯಕ್ತಿಯೊಬ್ಬರಿಗೆ ನೋಟಿಸ್ ಕಳುಹಿಸಿದೆ

ಜುಂಜುನು: ರಾಜಸ್ತಾನದ ಜುಂಜುನು ಜಿಲ್ಲೆಯಲ್ಲಿ ಸಾರ್ವಜನಿಕ ಬ್ಯಾಂಕ್ ವೊಂದು  50 ಪೈಸೆ ಮರುಪಾವತಿಸುವಂತೆ  ವ್ಯಕ್ತಿಯೊಬ್ಬರಿಗೆ ನೋಟಿಸ್ ಕಳುಹಿಸಿದೆ. ಆದರೆ, ಈ ನೋಟಿಸ್ ನ್ನು ಸ್ವೀಕರಿಸಲು  ಜೀತೇಂದ್ರ ಸಿಂಗ್ ತಿರಸ್ಕರಿಸಿದ್ದು, ಬ್ಯಾಂಕ್ ವಿರುದ್ಧ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

ಜುಂಜುನುವಿನ ಖೇಟ್ರಿಯಲ್ಲಿ ಈ ಪ್ರಕರಣ ನಡೆದಿದ್ದು, ರಾತ್ರಿ ವೇಳೆಯಲ್ಲಿ ಸಿಂಗ್ ಮನೆ ಮೇಲೆ ನೋಟಿಸ್ ಹಾಕಲಾಗಿದ್ದು, ಕಾನೂನು ಕ್ರಮದ ಬೆದರಿಕೆ ಹಾಕಲಾಗಿದೆ. 

ಬೆನ್ನು ಮೂಳೆಯ ಗಾಯದಿಂದ ಬಳಲುತ್ತಿರುವ ಸಿಂಗ್, ಲೋಕ ಅದಾಲತ್ ನಲ್ಲಿ  ಬಾಕಿ ಹಣವನ್ನು ಪಾವತಿಸಿಲ್ಲ, ಆದಾಗ್ಯೂ, ಅವರ ತಂದೆ ವಿನೋಧ್ ಸಿಂಗ್ ಅವರ ಪರವಾಗಿ ಅಲ್ಲಿಗೆ ಹೋದಾಗ ಬ್ಯಾಂಕ್ ಅಧಿಕಾರಿಗಳು ಹಣವನ್ನು ಕಟ್ಟಿಸಿಕೊಳ್ಳಲು ನಿರಾಕರಿಸಿದ್ದಾರೆ.

50 ಪೈಸೆಗಾಗಿ  ಬ್ಯಾಂಕ್ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದಾರೆ. ಬ್ಯಾಂಕ್ ನಿಂದ ಎನ್ ಒಸಿ ಪಡೆಯಲು ನಮ್ಮ ಕಕ್ಷಿದಾರರು ಠೇವಣಿ ಕಟ್ಟಲು  ಬಂದಿದ್ದಾರೆ. ಆದರೆ, ಅದನ್ನು ಠೇವಣಿಯನ್ನು  ಸ್ವೀಕರಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜೀತೇಂದ್ರ ಸಿಂಗ್  ಪರ ವಕೀಲ ವಿಕ್ರಮ್ ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ್ತಷ್ಟು ಜಾಗತಿಕ ಬೆಂಬಲ; ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸ್ಥಾನ ಕುರಿತು ಭಾರತದ ಬೆನ್ನಿಗೆ ನಿಂತ ಪೋರ್ಚುಗಲ್, ಮಾರಿಷಸ್!

'ಬಂಡಾಯ ಇಲ್ಲ, ಸರ್ವಾನುಮತದ ಅನುಮೋದನೆ’: SIR ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ!

ಗೋವಾದಲ್ಲಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವಘಡ; ನಟ ವಿಶಾಲ್ ಗೆ ಗಾಯ! Video

ತಂತ್ರಜ್ಞಾನ, ಆವಿಷ್ಕಾರದಿಂದ ಹೊಸ ವೇಗ, ಭಾರತದ ಆರ್ಥಿಕ ಬೆಳವಣಿಗೆ ಶೇ.10 ಮೀರಬಹುದು: ನಿರ್ಮಲಾ ಸೀತಾರಾಮನ್

Mangaluru: ವಿದ್ಯಾರ್ಥಿ ಸಂಘದ ಕಾರ್ಯಕ್ರಮದ ವೇಳೆ ತಡೆ ಗೋಡೆ ಕುಸಿತ; ವಿದ್ಯಾರ್ಥಿ ಬ್ರೇನ್‌ಡೆಡ್‌, ನಾಲ್ವರಿಗೆ ಗಾಯ, Video