ದೇಶ

ಜಾರ್ಖಂಡ್ ವಿಧಾನಸಭೆಯ 4ನೇ ಹಂತದ ಮತದಾನ: ಬೆಳಗ್ಗೆ 11ರವರೆಗೆ ಶೇಕಡಾ 28.5ರಷ್ಟು ಮತದಾನ

Sumana Upadhyaya

ರಾಂಚಿ: ಜಾರ್ಖಂಡ್‍ನಲ್ಲಿ 15 ಕ್ಷೇತ್ರಗಳಿಗೆ ಸೋಮವಾರ ನಡೆಯುತ್ತಿರುವ ನಾಲ್ಕನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಸರಾಸರಿ ಶೇಕಡಾ 28.56ರಷ್ಟು ಮತದಾನ ದಾಖಲಾಗಿದೆ.


ಚಂದಂಕಿಯಾರಿಯಲ್ಲಿ ಗರಿಷ್ಠ 35.01ರಷ್ಟು, ಬೊಕಾರೊದಲ್ಲಿ ಕನಿಷ್ಠ 21.46ರಷ್ಟು ಮತದಾನವಾಗಿದೆ.


ಕ್ಷೇತ್ರವಾರು ಮತದಾನ ಮಧುಪುರ್ ಶೇ31.82, ದಿಯೋಗಡ್ (ಎಸ್‍ಸಿ) ಶೇ 26.99, ಬಗೋದರ್ ಶೇ 34.63, ಜಮುವಾ (ಎಸ್‍ಸಿ) ಶೇ.27.11, ಗಂಡಿ ಶೇ 29.46, ಗಿರಿಧ್ ಶೇ.28.10, ದುಮ್ರಿ ಶೇ 32.49, ಬೊಕಾರೊ ಶೇ 21.46, ಚಂದಂಕಿಯಾರಿ(ಎಸ್‍ಸಿ) ಶೇ 35.01, ಸಿಂದ್ರಿ ಶೇ 33.52, ನಿರ್ಸಾ ಶೇ 31.70, ಧನ್‍ಬಾದ್ ಶೇ 21.84, ಝಾರಿಯಾ ಶೇ 22.81, ತುಂಡಿ ಶೇ 32.75, ಬಗ್‍ಮಾರ ಶೇ.28.40 11 ಗಂಟೆಯವರೆಗೆ ಆಗಿದೆ.


ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಕನಸಿನಲ್ಲಿದ್ದರೆ, ವಿರೋಧ ಪಕ್ಷಗಳಾದ ಜೆಎಂಎಂ, ಕಾಂಗ್ರೆಸ್ ಮತ್ತು ಆರ್ ಜೆಡಿ ತಮ್ಮ ಪೂರ್ವ ಚುನಾವಣಾ ಸೀಟು ಹೊಂದಾಣಿಕೆ ಯೋಜನೆಯಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

SCROLL FOR NEXT