ರಾಜಾ ಸಿಂಗ್ 
ದೇಶ

ಬಿಜೆಪಿ ಶಾಸಕ ರಾಜಾಸಿಂಗ್  ಹೆಸರು ರೌಡಿ ಶೀಟರ್ ಲಿಸ್ಟ್ ಗೆ ಸೇರಿಸಿದ ಹೈದ್ರಾಬಾದ್ ಪೊಲೀಸರು!

ನಗರದ ಗೋಶಾ ಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ದ ಪೊಲೀಸರು ರೌಡಿ ಶೀಟ್ ದಾಖಲಿಸಿದ್ದಾರೆ.

ಹೈದರಾಬಾದ್: ನಗರದ ಗೋಶಾ ಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ದ ಪೊಲೀಸರು ರೌಡಿ ಶೀಟ್ ದಾಖಲಿಸಿದ್ದಾರೆ.

ಮಂಗಳ್ ಘಾಟ್ ಠಾಣೆಯ ಪೊಲೀಸರು ತನ್ನ ವ್ಯಾಪ್ತಿಯಲ್ಲಿರುವ ರೌಡಿಗಳ ಪಟ್ಟಿಗೆ ರಾಜಾ ಸಿಂಗ್ ಸೇರ್ಪಡೆಗೊಳಿಸಿ ಹೊಸ ಪಟ್ಟಿನ್ನು ಬಿಡುಗಡೆ ಮಾಡಿದ್ದಾರೆ.

ಏತನ್ಮಧ್ಯೆ, ತಮ್ಮ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಿರುವ ಹೈದ್ರಾಬಾದ್ ನಗರ ಪೊಲೀಸರ ಕ್ರಮಕ್ಕೆ ಶಾಸಕ ರಾಜಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ತೆಲಂಗಾಣ ಪೊಲೀಸರು ನಿಜ ಬಣ್ಣ ಬಯಲಾಗಿದೆ. ಟಿಆರ್‌ಎಸ್, ಎಐಎಎಂ ಪಕ್ಷಗಳ ಅಣತಿಯಂತೆ  ಪೊಲೀಸ್ ಕಮೀಷನರ್ ಎ.ಕೆ.ಖಾನ್ ತಮ್ಮ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಿದ್ದಾರೆ ಎಂದು ರಾಜಸಿಂಗ್ ಆರೋಪಿಸಿದ್ದಾರೆ.

ಹೈದ್ರಾಬಾದ್ ಪೊಲೀಸರ ಕಾನೂನು ಬಾಹಿರ ಕ್ರಮದ  ಬಗ್ಗೆ ರಾಜ್ಯ ಡಿಜಿಪಿ ಕೂಡಲೇ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.   
ತೆಲಂಗಾಣ ಪೊಲೀಸರು ಟಿಆರ್ ಎಸ್ ಮತ್ತು ಎಂಐಎಂ ಪಕ್ಷಗಳ ಕೈಗೊಂಬೆಗಳಾಗಿದ್ದಾರೆ. ಎಂಐಎಂ ಪಕ್ಷದ ಒತ್ತಡವೇ  ತಮ್ಮ  ವಿರುದ್ಧ ರೌಡಿ ಶೀಟ್ ಆರಂಭಿಸಲು ಕಾರಣವಾಗಿದೆ ಎಂದು ದೂರಿದರು. ಅಂಬರ್ ಪೇಟ್ ನಲ್ಲಿ ಎಂಐಎಂ ನಾಯಕರು ಅಕ್ರಮವಾಗಿ ಮಸೀದಿ ನಿರ್ಮಿಸುತ್ತಿದ್ದು, ಇದನ್ನು ತಾವು ನಿರ್ಬಂಧಿಸಿದ್ದಾಗಿ ಹೇಳಿಕೊಂಡರು.

ಈ ವಿಷಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುವುದಾಗಿ ರಾಜಸಿಂಗ್ ಪ್ರಕಟಿಸಿದರು. 

ಶಾಸಕ ರಾಜಾಸಿಂಗ್ ವಿರುದ್ದ ತೆಲಂಗಾಣದ ವಿವಿಧ ಪೊಲೀಸ್ ಠಾಣೆಗಳು ಹಾಗೂ ದೇಶದ ವಿವಿಧ ಭಾಗಗಳಲ್ಲಿ ೪೩ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣದೊಂದಿಗೆ ಅವುಗಳ ಸಂಖ್ಯೆ ೪೪ಕ್ಕೆ ಏರಿಕೆಯಾಗಿದೆ. ಅಲ್ಲದೆ ಅತಿ ಹೆಚ್ಚು ಅಪರಾಧ ಪ್ರಕರಣ ಎದುರಿಸುತ್ತಿರುವ ಶಾಸಕ ಎಂಬ ಕುಖ್ಯಾತಿಗೆ ಒಳಗಾಗಿಗುವಂತೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT