ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಳೆ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹಿಂಸಾರೂಪ ತಳೆದ ಘಟನೆಗೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ದರ್ಯಗಂಜ್ ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ದಂಗೆಯೆಬ್ಬಿಸಿದ ಘಟನೆಗೆ ಸಂಬಂಧಿಸಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಸುಭಾಷ್ ಮಾರ್ಗ್ ಪ್ರದೇಶದಲ್ಲಿ ನಿಲುಗಡೆ ಮಾಡಿದ್ದ ಖಾಸಗಿ ಕಾರನ್ನು ಹೊತ್ತಿಸಿದ್ದರು. ತಕ್ಷಣವೇ ಬೆಂಕಿಯನ್ನು ಆರಿಸಲಾಗಿತ್ತು.