ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಚೆನ್ನೈ ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ 300 ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜಭವನದ ಬಳಿ ನೆರೆದಿದ್ದ 200 ಪ್ರತಿಭಟನಾ ನಿರತರೂ ಈ ಪೈಕಿ ಇದ್ದಾರೆ. ಪೊಲೀಸರು ಪ್ರತಿಭಟನಾ ನಿರತರನ್ನು ಎಳೆದೊಯ್ದರು, ಈ ವೇಳೆ ಕೆಲ ಕಾಲ ಶಾಂತಿ ಕದಡಿದ ವಾತಾವರಣ ಉಂಟಾಗಿತ್ತು.
ಪ್ರತಿಭಟನಾ ನಿರತರು ರಸ್ತೆ ತಡೆ ನಡೆಸಿದ ಬೆನ್ನಲ್ಲೇ 500 ಪೊಲೀಸರು ಸ್ಥಳಕ್ಕೆ ಆಗಮಿಸಿ 3 ಬಸ್ ನಲ್ಲಿ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದರು.