ಪ್ರಧಾನಿ ಮೋದಿ 
ದೇಶ

ದೆಹಲಿ ರ್ಯಾಲಿ ವೇಳೆ ಮೋದಿ ಹತ್ಯೆಗೆ ಉಗ್ರರಿಂದ ಭಾರೀ ಸಂಚು!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಡಿ.22 ರಂದು ಹತ್ಯೆ ಮಾಡಲು ಭಾರೀ ಸಂಚು ರೂಪಿಸಿದ್ದಾರೆಂದ ಸ್ಫೋಟಕ ಮಾಹಿತಿಯನ್ನು ಗುಪ್ತಚರ ದಳ ಎಚ್ಚರಿಗೆ ನೀಡಿದೆ. 

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಡಿ.22 ರಂದು ಹತ್ಯೆ ಮಾಡಲು ಭಾರೀ ಸಂಚು ರೂಪಿಸಿದ್ದಾರೆಂದ ಸ್ಫೋಟಕ ಮಾಹಿತಿಯನ್ನು ಗುಪ್ತಚರ ದಳ ಎಚ್ಚರಿಗೆ ನೀಡಿದೆ. 

ಡಿ.22 ರಂದು ದೆಹಲಿ ರಾಮಲೀಲಾ ಮೈದಾನದಲ್ಲಿ ಬಿಜೆಪಿ ಬೃಹತ್ ರ್ಯಾಲಿ ಆಯೋಜಿಸಿದ್ದು, ದೆಹಲಿಯ ಅಕ್ರಮ ಕಾಲೋನಿಗಳನ್ನು ಸಕ್ರಮಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಸಂಬಂಧ ಈ ರ್ಯಾಲಿ ನಡೆಯುತ್ತಿದೆ. 

ಇದರಲ್ಲಿ ಮೋದಿಯವರು ಭಾಗವಹಿಸುತ್ತಿದ್ದು, ಈ ವೇಳೆ ಮೋದಿ ಹತ್ಯೆಗೆ ಉಗ್ರರು ಭಾರೀ ಸಂಚು ರೂಪಿಸಿದ್ದಾರೆಂದು ಗುಪ್ತಚರ ದಳವು ದೆಹಲಿ ಪೊಲೀಸರು ಹಾಗೂ ಪ್ರಧಾನಮಂತ್ರಿ ಭದ್ರತೆ ನೋಡಿಕೊಳ್ಳುವ ಎಸ್'ಜಿಪಿ ಪಡೆಗೆ ಸಂದೇಶ ರವಾನಿಸಿದೆ. 

ರ್ಯಾಲಿದಲ್ಲಿ ವಿವಿಧ ರಾಜ್ಯಗಳ ಎನ್'ಡಿಎ ಮುಖ್ಯಮಂತ್ರಿಗಳು, ಕೇಂದ್ರ ಸಚಿವರುಗಳು, ಬಿಜೆಪಿ ನಾಯಕರು, ದೊಡ್ಡ ಪ್ರಮಾಣದಲ್ಲಿ ಜನರು ಹಾಗೂ ಪತ್ರಕರ್ತರು ನೆರೆಯಲಿದ್ದಾರೆ. ಅದೇ ಸಮಾರಂಭದಲ್ಲಿ  ಮೋದಿ ಹತ್ಯೆ ಮಾಡಬೇಕೆಂದು ಉಗ್ರರು ಈಗ ಭಾರತಕ್ಕೆ ಬಂದು ಸೇರಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!