ದೇಶ

ಕಿರಾರಿ ಅಗ್ನಿ ಅವಘಡ: ದೆಹಲಿ ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

Lingaraj Badiger

ನವದೆಹಲಿ: ದೆಹಲಿಯ ಹೊರವಲಯದ ಕಿರಾರಿಯಲ್ಲಿನ ಮೂರು ಮಹಡಿಯ ವಸತಿ ಮತ್ತು ವಾಣಿಜ್ಯ ಕಟ್ಟಡದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಮೃತಪಟ್ಟ 9 ಮಂದಿಯ ಕುಟುಂಬಕ್ಕೆ ದೆಹಲಿ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ನಿನ್ನೆ ಮಧ್ಯರಾತ್ರಿ 12.30ರ ಸುಮಾರಿಗೆ ಸಂಭವಿಸಿದ ರ ಈ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳಿಗೂ ತಲಾ 1 ಲಕ್ಷ ರೂಪಾಯಿ ಪರಿಹಾರ ಹಾಗೂ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಹೇಳಿದ್ದಾರೆ.

ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಒಬ್ಬರು ಸುಟ್ಟ ಗಾಯಳಿಂದಾಗಿ ಮೃತಪಟ್ಟಿದ್ದು, ಇತರೆ 8 ಮಂದಿ ಉಸಿರಾಡಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ಎಸ್ ಡಿಎಂ ತನಿಖೆಗೆ ಆದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಿರಾರಿ ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು, ಐವರು ಹೆಣ್ಣುಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ.

ಕಟ್ಟಡದ ಕೆಳ ಮಹಡಿಯಲ್ಲಿ ಬಟ್ಟೆ ಗೋದಾಮು ಇದ್ದು, ಇನ್ನುಳಿದ ಮೂರು ಮಹಡಿಗಳು ವಸತಿ ಸ್ಥಳಗಳಾಗಿವೆ. 

ಮೃತರನ್ನು ರಾಮ್ ಚಂದ್ರ ಝಾ(65ವ) ಸುಂದರಿಯಾ ದೇವಿ(58ವ), ಸುಂಜು ಜಾ(36ವ), ಉದಯ್ ಚೌಧರಿ(33ವ) ಮತ್ತು ಅವರ ಪತ್ನಿ ಮುಕ್ಸಾನ್(26ವ) ಮತ್ತು ಅವರ ಮಕ್ಕಳಾದ ಅಂಜಲಿ(10ವ), ಆದರ್ಶ್(7) ಮತ್ತು ತುಳಸಿ(6ತಿಂಗಳು) ಎಂದು ಗುರುತಿಸಲಾಗಿದೆ.

SCROLL FOR NEXT