ದೇಶ

ಸಚಿನ್ ತೆಂಡೂಲ್ಕರ್ ಗೆ ಕಲ್ಪಿಸಿದ್ದ ಭದ್ರತೆ ಹಿಂಪಡೆದ ಉದ್ಧವ್ ಠಾಕ್ರೆ ಸರ್ಕಾರ

Srinivas Rao BV

ಮುಂಬೈ: ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಒದಗಿಸಲಾಗಿರುವ ಭದ್ರತೆಯನ್ನು ಹಿಂಪಡೆಯಲು ಮಹಾರಾಷ್ಟ್ರ ಪೊಲೀಸ್ ಇಲಾಖೆ ಬುಧವಾರ ನಿರ್ಧರಿಸಿದೆ.
 
ಸಚಿನ್ ತೆಂಡೂಲ್ಕರ್ ಅವರಿಗೆ ಈವರೆಗೆ ಎಕ್ಸ್ ದರ್ಜೆಯ ಭದ್ರತೆ ಒದಗಿಸಲಾಗಿತ್ತು. 24 ಗಂಟೆಗಳ ಕಾಲ ಪೊಲೀಸ್ ಕಾನ್‌ಸ್ಟೆಬಲ್ ಗಳನ್ನು ಅವರ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸಚಿನ್ ಅವರ ಭದ್ರತೆಯನ್ನು ಪರಿಶೀಲಿಸಿದ ರಾಜ್ಯ ಪೊಲೀಸ್ ಉನ್ನತಾಧಿಕಾರಿಗಳ ಸಮಿತಿ, ಅವರಿಗೆ ಒದಗಿಸಿರುವ ಎಕ್ಸ್ ದರ್ಜೆ ಭದ್ರತೆ ಹಿಂಪಡೆಯಲು ನಿರ್ಧರಿಸಿದೆ. 

24 ಗಂಟೆಗಳ ಪೊಲೀಸ್ ಭದ್ರತೆ ವಾಪಸ್ಸು ಪಡೆದರೂ, ಸಚಿನ್ ಪ್ರವಾಸ ಕೈಗೊಳ್ಳುವ ವೇಳೆ ಬೆಂಗಾವಲು ಭದ್ರತೆ ಮುಂದುವರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಶಿವಸೇನಾ ನಾಯಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರಿಗೆ ಝಡ್ ವರ್ಗ ಭದ್ರತೆ ಕಲ್ಪಿಸಲು ನಿರ್ಧರಿಸಿದ್ದಾರೆ. ಹಿಂದೆ, ವೈಪ್ಲಸ್ ಭದ್ರತೆಯನ್ನು ಅವರಿಗೆ ಒದಗಿಸಲಾಗಿತ್ತು. ಈಗ ಅದನ್ನು ಝಡ್ ವರ್ಗಕ್ಕೆ ಏರಿಸಲಾಗಿದೆ.
  
ಬಿಜೆಪಿ ಮುಖಂಡ ಏಕ್ ನಾಥ್ ಖಡ್ಸೆ ಅವರಿಗೆ ಈ ಹಿಂದಿನ ವೈ ವರ್ಗದ ಭದ್ರತೆಯ ಜೊತೆಗೆ ಬೆಂಗಾವಲು ಒದಗಿಸಲಾಗಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಮ್   ಅವರಿಗೆ ಕಲ್ಪಿಸಿದ್ದ ಝಡ್ ಪ್ಲಸ್ ವರ್ಗದ ಭದ್ರತೆಯನ್ನು ತಗ್ಗಿಸಿ ವೈಕ್ಯಾಟಗರಿಗೆ ಇಳಿಸಲಾಗಿದೆ. ಮಹಾರಾಷ್ಟ್ರದಲ್ಲಿ 97 ನಾಯಕರಿಗೆ ಭದ್ರತೆ ಒದಗಿಸಲಾಗಿದ್ದು, 29 ನಾಯಕರ ಭದ್ರತೆಯನ್ನು ಪರಿಷ್ಕರಿಸಲಾಗಿದೆ. ಕೆಲ ನಾಯಕರಿಗಿರುವ ಬೆದರಿಕೆಯ ತೀವ್ರತೆ ಪರಗಣಿಸಿ ಭದ್ರತಾ ವ್ಯವಸ್ಥೆಯನ್ನು ತಗ್ಗಿಸಿದ್ದು, ಇತರ ಕೆಲವು ನಾಯಕರ ಭದ್ರತೆಯನ್ನು ಹೆಚ್ಚಿಸಲಾಗಿದೆ.

SCROLL FOR NEXT