ದೇಶ

ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ, ಟ್ವೀಟ್ ಮೂಲಕ ಸಂತಸ

Srinivasamurthy VN

ನವದೆಹಲಿ: ಜಗತ್ತಿನ ಹಲವೆಡೆ ಸಂಭವಿಸಿದ ಕಂಕಣ ಸೂರ್ಯಗ್ರಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಕಣ್ತುಂಬಿಕೊಂಡಿದ್ದು, ಗ್ರಹಣದ ಬಳಿಕ ಟ್ವೀಟ್ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇಂದು ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಕಣ ಸೂರ್ಯಗ್ರಹಣ ವೀಕ್ಷಿಸಿದರು. ಬಳಿಕ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ,'ಅನೇಕ ಭಾರತೀಯರಂತೆ ನಾನು ಕೂಡ ಸೂರ್ಯಗ್ರಹಣದ ಬಗ್ಗೆ ಉತ್ಸಾಹವನ್ನು ಹೊಂದಿದ್ದೇನೆ. ದೆಹಲಿಯಲ್ಲಿ ಮೋಡ ಕವಿದಿರುವುದರಿಂದ ದುರಾದೃಷ್ಟವಶಾತ್​ ಸೂರ್ಯನನ್ನು ನೋಡಲು ಸಾಧ್ಯವಾಗಲಿಲ್ಲ. ಆದರೆ, ನೇರಪ್ರಸಾರದ ಮೂಲಕ ಕೇರಳದ ಕೋಳಿಕ್ಕೋಡ್​ ಹಾಗೂ ದೇಶದ ಇನ್ನಿತರ ಭಾಗಗಳಲ್ಲಿ ಸಂಭವಿಸಿದ ಗ್ರಹಣ ಕೆಲ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದೇನೆ. ಇದರೊಂದಿಗೆ ಖಗೋಳ ಶಾಸ್ತ್ರಜ್ಞರ ಬಳಿ ಗ್ರಹಣದ ಬಗ್ಗೆ ತಿಳಿಯುವ ಮೂಲಕ ನನ್ನ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇಂದಿನ ಕಂಕಣ ಸೂರ್ಯಗ್ರಹಣ ಈ ವರ್ಷದ ಕೊನೆಯ ಹಾಗೂ ಮೂರನೇ ಸೂರ್ಯಗ್ರಹಣವಾಗಿದೆ. ಬಾನಂಗಳದಲ್ಲಿ ನಡೆದ ನೆರಳು ಬೆಳಕಿನ ಬೆಂಕಿಯ ಬಳೆಯಾಟವನ್ನು ಜಗತ್ತಿನೆಲ್ಲಡೆ ಜನರು ವೀಕ್ಷಣೆ ಮಾಡಿದ್ದಾರೆ.

SCROLL FOR NEXT