ದೇಶ

ರಾಮ ಮಂದಿರ ನಿರ್ಮಾಣ ವಿಳಂಬ ಮಾಡಬಾರದು-ಇಕ್ಬಾಲ್ ಅನ್ಸಾರಿ

Sumana Upadhyaya

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಬಾಬರಿ ಮಸೀದಿ ಪ್ರಕರಣದಲ್ಲಿ ಪ್ರಮುಖ ಮುಸ್ಲಿಂ ಕಕ್ಷಿದಾರರಾಗಿದ್ದ ಇಕ್ಬಾಲ್ ಅನ್ಸಾರಿ ಪ್ರಧಾನಿ ನರೇಂದ್ರಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.


‘ನ್ಯಾಯಾಲಯ ರಾಮಮಂದಿರ ನಿರ್ಮಾಣದ ಪರ ನ್ಯಾಯಾಲಯವೇ ತೀರ್ಪು ನೀಡಿರುವಾಗ ಭವ್ಯ ಮಂದಿರ ನಿರ್ಮಾಣಕ್ಕೆ ಯಾವುದೇ ವಿಳಂಬ ಮಾಡಬಾರದು.’ ಎಂದು ಇಕ್ಬಾಲ್ ಅನ್ಸಾರಿ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.


ರಾಮ ಮಂದಿರ ನಿರ್ಮಾಣಕ್ಕೆ ಎಲ್ಲ ಸಮುದಾಯಗಳ ಜನರು ಬೆಂಬಲ ನೀಡುವಂತೆ ಕೋರಿರುವ ಅವರು, ಅಯೋಧ್ಯೆಯಲ್ಲಿ ರಸ್ತೆಗಳು, ಯಾತ್ರಿಕರಿಗೆ ಉತ್ತಮ ಅತಿಥಿ ಗೃಹಗಳು ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು. ಇದರಿಂದ ವಿಶ್ವದೆಲ್ಲೆಡೆಯಿಂದ ಯಾತ್ರಿಕರು ರಾಮಮಂದಿರವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಮಂದಿರದಿಂದ ಸರಯು ನದಿಯನ್ನು ಯಾತ್ರಿಕರು ವೀಕ್ಷಿಸುವಂತೆ ಮಂದಿರ ನಿರ್ಮಾಣ ಮಾಡಬೇಕು. ಅಯೋಧ್ಯೆಯಲ್ಲಿನ ರೈಲ್ವೆ ನಿಲ್ದಾಣವು ರಾಮಮಂದಿರದ ಪ್ರತಿರೂಪದಂತಿರಬೇಕು ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

SCROLL FOR NEXT