ದೇಶ

ಯಾವುದೇ ಪ್ರತಿಭಟನೆ ನಡೆಸುವ 24 ಗಂಟೆ ಮುನ್ನ ಮಾಹಿತಿ ನೀಡಿ: ವಿದ್ಯಾರ್ಥಗಳಿಗೆ ದೆಹಲಿ ವಿ.ವಿ ಆದೇಶ 

Sumana Upadhyaya

ನವದೆಹಲಿ; ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ಮುಂದುವರಿದಿರುವ ಸಂದರ್ಭದಲ್ಲಿ ದೆಹಲಿ ವಿಶ್ವವಿದ್ಯಾಲಯ ನೊಟೀಸ್ ಜಾರಿ ಮಾಡಿದ್ದು ಯಾವುದೇ ಪ್ರತಿಭಟನೆ ನಡೆಸುವ 24 ಗಂಟೆ ಮೊದಲು ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದೆ.


ಕಳೆದ ಡಿಸೆಂಬರ್ 27ಕ್ಕೆ ದೆಹಲಿ ವಿಶ್ವವಿದ್ಯಾಲಯದ ಪ್ರೊಕ್ಟರ್ ನೀತಾ ಸೆಹಗಲ್ ನೊಟೀಸ್ ನೀಡಿದ್ದು ಅದರಲ್ಲಿ ಪ್ರತಿಭಟನೆಯ ಸಂಘಟಕರು ಕಾರ್ಯಕ್ರಮದ ವಿವರ, ಭಾಷಣಗಾರರ ಪಟ್ಟಿ, ಭಾಗವಹಿಸುವವರ ಸಂಖ್ಯೆಯನ್ನು ಸಹ ನೀಡಬೇಕೆಂದು ಸೂಚಿಸಿದ್ದಾರೆ. ಸಭೆ/ಪ್ರತಿಭಟನೆ ಸೇರುವ ಬಗ್ಗೆ ಪೂರ್ವಾನ್ವಯ ಮಾಹಿತಿ, ಕಲಾ ವಿಭಾಗದ ಹೊರಗೆ ಪ್ರತಿಭಟನೆ ಮತ್ತು ಪಕ್ಕದ ಪ್ರದೇಶದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕೆಂದು ಹೇಳಿದೆ.


ಎಡಪಂಥೀಯ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟ ದೆಹಲಿ ವಿಶ್ವವಿದ್ಯಾಲಯದ ಈ ನಡೆಯನ್ನು ಖಂಡಿಸಿದ್ದು ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ, ಪ್ರತಿಭಟನೆ ಮಾಡುವುದು ನಾಗರಿಕರ ಸಾಂವಿಧಾನಿಕ ಹಕ್ಕು. ಅದನ್ನು ಮುಕ್ತವಾಗಿ, ಸ್ವತಂತ್ರವಾಗಿ ನಡೆಸಲು ಬಿಡಬೇಕು ಎಂದು ಹೇಳಿದೆ. 

SCROLL FOR NEXT