ದೇಶ

ಗೋವಾದಲ್ಲಿ ಮಹದಾಯಿ ನದಿಗೆ ಅಡ್ಡಲಾಗಿ ಜಲವಿದ್ಯುತ್ ಘಟಕ?

Manjula VN

ಪಣಜಿ: ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇನ್ನಿತರೆ ಭಾಗಗಳಿಗೆ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ ಯೋಜನೆ ಸಂಬಂಧ ಕರ್ನಾಟಕ ಮತ್ತು ಗೋವಾ ಸರ್ಕಾರಗಳ ನಡುವೆ ಅಸಮಾಧಾನ ಏರ್ಪಟ್ಟಿರುವ ಬೆನ್ನಲ್ಲೇ, ಮಹದಾಯಿ ನದಿಗೆ ಅಡ್ಡಲಾಗಿ ಜಲವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಗೋವಾಗೆ ಭೇಟಿ ನೀಡಿರುವ ಕೇಂದ್ರ ಇಂಧನ ಖಾತೆ ಸಚಿವ ಆರ್.ಕೆ.ಸಿಂಗ್ ಜಲವಿದ್ಯುತ್ ಉತ್ಪಾದನಾ ಘಟಕ ಆರಂಭಿಸಲು ಗೋವಾ ಸರ್ಕಾರಕ್ಕೆ ಸೂಕ್ತ ಜಾಗ ತೋರಿಸಿದಲ್ಲಿ ಘಟಕ ಆರಂಭಿಸಲು ಕೇಂದ್ರ ಸಿದ್ಧ ಎಂದು ಹೇಳಿದ್ದಾರೆ. 

ಗೋವಾ ತನ್ನ ರಾಜ್ಯದಲ್ಲಿ ಯಾವುದೇ ವಿದ್ಯುತ್ ಉತ್ಪಾದನಾ ಘಟಕ ಹೊಂದಿಲ್ಲ. ತನ್ನ ಬೇಡಿಕೆಗೆ ಅದು ಪೂರ್ಣವಾಗಿ ಹೊರ ರಾಜ್ಯಗಳನ್ನು ಅವಲಂಬಿಸಿದೆ. 

SCROLL FOR NEXT