ದೇಶ

15 ದಿನದಲ್ಲಿ ಫಾಸ್ಟ್ ಟ್ಯಾಗ್ ಮೂಲಕ 52 ಕೋಟಿ ಟೋಲ್ ಸಂಗ್ರಹ

Lingaraj Badiger

ನವದೆಹಲಿ: ಡಿಸೆಂಬರ್ 15 ರಂದು ಪರಿಚಯಿಸಿದ ಮೊದಲ ಹದಿನೈದು ದಿನಗಳಲ್ಲೇ ಫಾಸ್ಟ್ಯಾಗ್ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವು 52 ಕೋಟಿ ರೂ.ಗಳನ್ನು ದಾಟಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ತಿಳಿಸಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಫಾಸ್ಟ್‌ಟ್ಯಾಗ್ ಬಳಕೆ ಹೆಚ್ಚಾಗಿದ್ದು ಈಗಾಗಲೇ 1.15 ಕೋಟಿ ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳ ಮೂಲಕ ಪ್ರಯಾಣಿಕರಿಗೆ ಫಾಸ್ ಟ್ಯಾಗ್ ಸುಗಮ ಪ್ರಯಾಣವನ್ನು ಒದಗಿಸುತ್ತಿರುವುದರಿಂದ 1.15 ಕೋಟಿ ಫಾಸ್ಟ್‌ಟ್ಯಾಗ್‌ಗಳನ್ನು ಈಗಾಗಲೇ ನೀಡಲಾಗಿದ್ದು, ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ವಿತರಿಸಲಾಗುತ್ತಿದೆ.

ಈಗಾಗಲೇ ಫಾಸ್ಟ್‌ಟ್ಯಾಗ್‌ಗಳ ವಹಿವಾಟು ಸಂಖ್ಯೆ 30 ಲಕ್ಷ ದಾಟಿರುವುದರಿಂದ, ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ 52 ಕೋಟಿ ರೂ.ಗಳನ್ನು ದಾಟಿದೆ ಎಂದು ಸಚಿವಾಲಯ ತಿಳಿಸಿದೆ.

SCROLL FOR NEXT