ದೇಶ

ಭೀಮಾ ಕೊರೆಗಾಂವ್ ಪ್ರಕರಣ: ಹೋರಾಟಗಾರ ಆನಂದ್ ತೆಲ್ತುಂಬೆಡ್ ಬಿಡುಗಡೆಗೆ ಪುಣೆ ಕೋರ್ಟ್ ಆದೇಶ

Raghavendra Adiga
ಪುಣೆ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಿಗ್ಗೆ ಪೌಣೆ ಪೋಲೀಸರು ಖ್ಯಾತ ದಲಿತ ಹೋರಾಟಗಾರ ಆನಂದ್ ತೆಲ್ತುಂಬೆಡ್ ಅವರನ್ನು ಬಂಧಿಸಿದ್ದು ಈ ಬಂಧನ ಕಾನೂನುಬಾಹಿರ ಎಂದ ಪುಣೆ ಸೆಷನ್ಸ್ ಕೋರ್ಟ್ ತಕ್ಷಣ ಆನಂದ್ ಅವರ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹೋರಾಟಗಾರ ಆನಂದ್ ತೆಲ್ತುಂಬೆಡ್ ಫೆಬ್ರವರಿ 11ರವರೆಗೆ ಬಂಧನ ವಿರುದ್ಧ  ಮಧ್ಯಂತರ ತಡೆ ಕೋರಿದ್ದಾರೆ.ಅಷ್ಟರಲ್ಲಿ, ಅವರು ಸೆಷನ್ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳಲ್ಲಿ ಜಾಮೀನಿಗಾಗಿ ಅಥವಾ ಬಂಧನ ಪೂರ್ವ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.
ಪುಣೆ ಸೆಷನ್ಸ್ ಕೋರ್ಟ್ ಶುಕ್ರವಾರ ಆನಂದ್ ಅವರ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿತ್ತು. ಮತ್ತು ಅವರನ್ನು ಮುಂಬೈನ ವಿಲ್ಲೆ ಪಾರ್ಲೆ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು.
ಭೀಮಾ-ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪುಣೆ ಪೋಲೀಸರು ಆನಂದ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಕಳೆದ ತಿಂಗಳು ತೆಲ್ತುಂಬೆಡ್ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿತ್ತು.
ಕಳೆದ ವರ್ಷ ಜನವರಿ 1ರಂದು ಪುಣೆ ಸಮೀಪದ ಭೀಮಾ-ಕೊರೆಗಾಂವ್ ನಲ್ಲಿ ಭೀಮಾ-ಕೊರೆಗಾಂವ್ದಂಗೆಯ ದ್ವಿಶತಮಾನೋತ್ಸವ ಸಂಭ್ರಮಾಚರಣೆ ನಡೆದ ವೇಳೆ ಭಾರೀ ಪ್ರಮಾಣದ ಹಿಂಸಾಚಾರ ಸಂಭವಿಸಿದ್ದವು.
SCROLL FOR NEXT