ಐಪಿಎಸ್ ಅಧಿಕಾರಿ ರಿಷಿಕುಮಾರ್ ಶುಕ್ಲಾ ಸಿಬಿಐ ನ ನೂತನ ನಿರ್ದೇಶಕ 
ದೇಶ

ಸಿಬಿಐ ನೂತನ ನಿರ್ದೇಶಕರಾಗಿ ಐಪಿಎಸ್ ಅಧಿಕಾರಿ ರಿಷಿಕುಮಾರ್ ಶುಕ್ಲಾ ನೇಮಕ

ಐಪಿಎಸ್ ಅಧಿಕಾರಿ ರಿಷಿಕುಮಾರ್ ಶುಕ್ಲಾ ಅವರನ್ನು ಪ್ರಧಾನಿ ನೇತೃತ್ವದ ಸಮಿತಿ ಸಿಬಿಐ ಗೆ ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.

ನವದೆಹಲಿ: ಐಪಿಎಸ್ ಅಧಿಕಾರಿ ರಿಷಿಕುಮಾರ್ ಶುಕ್ಲಾ ಅವರನ್ನು ಪ್ರಧಾನಿ ನೇತೃತ್ವದ ಸಮಿತಿ ಸಿಬಿಐ ಗೆ ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. 
ಮಧ್ಯಪ್ರದೇಶದ ಮಾಜಿ  ಡಿಜಿಪಿ ಆಗಿರುವ ಶುಕ್ಲಾ 1983 ರ ಬ್ಯಾಚ್ ನ ಐಪಿಎಸ್ ಅಧಿಕಾರಿ 
ಸಿಬಿಐ ನಿರ್ದೇಶಕರಾಗಿ ಎರಡು ವರ್ಷಗಳ ಕಾಲಾವಧಿ ಹೊಂದಿರುವ ಶುಕ್ಲಾ, ಅತ್ಯಂತ ಕಡಿಮೆ ಅವಧಿಯಲ್ಲಿ ತನಿಖಾ ಸಂಸ್ಥೆಯ ಮೇಲಿನ ಗೌರವವನ್ನು ಹೆಚ್ಚಿಸುವ ಸವಾಲನ್ನು ಹೊಂದಿದ್ದಾರೆ. 
ಇನ್ನು ಅಗಸ್ಟಾ ವೆಸ್ಟ್ ಲ್ಯಾಂಡ್, 2ಜಿ ಹಗರಣ, ಏರ್ ಇಂಡಿಯಾ ಹಗರಣ, ಕಲ್ಲಿದ್ದಲು ಹಗರಣ, ಪಿ ಚಿದಂಬರಂ ಭುಪೇಂದರ್ ಸಿಂಗ್ ಹೂಡಾ ಸೇರಿದಂತೆ ಅನೇಕ ಮಹತ್ವದ ಪ್ರಕರಣಗಳನ್ನು ಪೂರ್ಣಗೊಳಿಸುವ ಜವಾಬ್ದಾರಿಯೂ ಶುಕ್ಲಾ ಅವರ ಹೆಗಲೇರಲಿದೆ. 
ಈ ಹಿಂದೆ ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರನ್ನು ಪ್ರಧಾನಿ ನೇತೃತ್ವದ ಸಮಿತಿ ವಜಾಗೊಳಿಸಿತ್ತು. ಇದಾದ ಬಳಿಕ ಜ.10 ರಿಂದ ನಾಗೇಶ್ವರ್ ರಾವ್ ಅವರು ಹಂಗಾಮಿ ಸಿಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು.  ಪೂರ್ಣಾವಧಿ ಸಿಬಿಐ ನಿರ್ದೇಶಕರ ನೇಮಕವಾಗದೇ ಇದ್ದದ್ದಕ್ಕೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನವನ್ನೂ ಹೊರಹಾಕಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT