ಪೋಸ್ಟರ್ 
ದೇಶ

ರಾಮ ದೇವರಾಗಿ ರಾಹುಲ್ ಗಾಂಧಿಯನ್ನು ಬಿಂಬಿಸಿದ ಕಾಂಗ್ರೆಸ್ ವಿರುದ್ಧ ದೂರು ದಾಖಲು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ರಾಮ ದೇವರಾಗಿ ಬಿಂಬಿಸಿ ತೋರಿಸಿದ ಪೋಸ್ಟರ್ ನ್ನು ...

ಪಾಟ್ನಾ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ರಾಮ ದೇವರಾಗಿ ಬಿಂಬಿಸಿ ತೋರಿಸಿದ ಪೋಸ್ಟರ್ ನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ ಪ್ರಕರಣ ಬಿಹಾರ ರಾಜಧಾನಿ ಪಾಟ್ನಾದಲ್ಲಿ ವರದಿಯಾಗಿದೆ.

ಪಾಟ್ನಾದ ನಗರದ ಬೀದಿಗಳಲ್ಲಿ ಅಲ್ಲಲ್ಲಿ ರಾಹುಲ್ ಗಾಂಧಿಯನ್ನು ರಾಮದೇವರಂತೆ ಬಿಂಬಿಸುವ ಪೋಸ್ಟರ್ ನ್ನು ಕೆಲ ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಹಾಕಿದ್ದರು. ರಾಹುಲ್ ಗಾಂಧಿಯ ಫೋಟೋದ ಜೊತೆಗೆ ಕಾಂಗ್ರೆಸ್ ನ ಪ್ರಮುಖ ನಾಯಕರ ಫೋಟೋಗಳು ಕೂಡ ಪೋಸ್ಟರ್ ನಲ್ಲಿವೆ.

ಬಿಹಾರದ ಆಡಳಿತಾರೂಢ ಸರ್ಕಾರವನ್ನು ಟೀಕಿಸಿ ಪೋಸ್ಟರ್ ನಲ್ಲಿ ನೀವು ರಾಮ ನಾಮ ಜಪಿಸುತ್ತೀರಿ, ಆದರೆ ನಮ್ಮಲ್ಲಿ ಇಂದು ಜೀವಂತ ರಾಮನಿದ್ದಾರೆ ಎಂದು ಬರೆಯಲಾಗಿದೆ.

ರಾಹುಲ್ ಗಾಂಧಿಯನ್ನು ರಾಮ ದೇವರಂತೆ ಬಿಂಬಿಸಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಹಾರ ಕಾಂಗ್ರೆಸ್ ಮುಖ್ಯಸ್ಥ ಮದನ್ ಮೋಹನ್ ಜಾ ಸೇರಿದಂತೆ ಇನ್ನೂ ನಾಲ್ವರ ವಿರುದ್ಧ ಪಾಟ್ನಾ ಸಿವಿಲ್ ಕೋರ್ಟ್ ನಲ್ಲಿ ದೂರು ದಾಖಲಾಗಿದೆ.

ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ ಕಾಂಗ್ರೆಸ್ ನ್ನು ಟೀಕಿಸಿ ಗಾಂಧಿ ಹೆಸರನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಕೀಳು ರಾಜಕೀಯ ಎಂದು ಟೀಕಿಸಿದೆ.
ಇಲ್ಲಿ ನಾಳೆ ರಾಹುಲ್ ಗಾಂಧಿ ಜನ ಆಕಾಂಕ್ಷ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್

ಬಾಗಲಕೋಟೆ ಬಳಿ ಭೀಕರ ಅಪಘಾತ: ಬೈಕ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್