ದೇಶ

ಸೀಮಾಂಚಲ ಎಕ್ಸ್ ಪ್ರೆಸ್ ದುರಂತ: ಅಪಘಾತಕ್ಕೆ ಬೋಗಿಗಳ ನಡುವಿನ ಕಳಪೆ ಜೋಡಣೆ ಕಾರಣ?!

Srinivas Rao BV
ಪಾಟ್ನಾ: ಕಳೆದ ವರ್ಷ ಸರಣಿ ರೈಲು ಅಪಘಾತದ ಕಹಿ ಘಟನೆಗಳನ್ನು ಮರೆಯುವ ಮುನ್ನವೇ ಸೀಮಾಂಚಲ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 6 ಜನರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. 
ಪ್ರತ್ಯಕ್ಷದರ್ಶಿಗಳು ಈ ಅಪಘಾತದ ಬಗ್ಗೆ ಮಾತನಾಡಿದ್ದು, ರೈಲು ಅಪಘಾತಕ್ಕೆ ಕಾರಣವಾಗಬಹುದಾಗಿರುವ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.  ಬಿಹಾರದ ಕಾತಿಹಾರ್ ಬಳಿ ರೈಲು ಆಗಮಿಸುತ್ತಿದ್ದಂತೆಯೇ ಎರಡು ಕೋಚ್ ಗಳನ್ನು ಕೂಡಿಸುವ ಕೊಂಡಿ ಕಳಚಿತ್ತು.  ಆದರೆ ಅದನ್ನು ಸೂಕ್ತ ರೀತಿಯಲ್ಲಿ ಮರು ಜೋಡಣೆ ಮಾಡುವ ಬದಲು ಕಳಪೆ ಜೋಡಣೆ ಮಾಡಲಾಗಿದೆ ಇದೇ ಬೋಗಿಗಳು ಹಳಿ ತಪ್ಪುವುದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. 
ಆದರೆ ಪ್ರತ್ಯಕ್ಷದರ್ಶಿಗಳು ನೀಡುತ್ತಿರುವ ಕಾರಣವನ್ನು ರೈಲ್ವೆ ಇಲಾಖೆ ಸಾರಾಸಗಟಾಗಿ ತಿರಸ್ಕರಿಸಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಲಾಗುವುದು ಎಂದು ಹೇಳಿದೆ. ಈ ನಡುವೆ ಅಪಘಾತ ನಡೆದ ಬೆನ್ನಲ್ಲೆ ಡಿಆರ್ ಎಂ ಕಚೇರಿಯಿಂದ ಹಲವು ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂಬ ವರದಿಯೂ ಪ್ರಕಟವಾಗಿದೆ. 
ರೈಲ್ವೆ ಇಲಾಖೆಯ ಪ್ರಕಾರ ಬಾರೂನಿಯ ಬಳಿ ಹಳಿ ಬಿರುಕುಬಿಟ್ಟಿದ್ದೇ ಕಾರಣ ಎಂದು ಹೇಳಲಾಗುತ್ತಿದೆ. ಸರಿಯಾದ ಸ್ಥಿತಿಯಲ್ಲಿರುವ 12 ಬೋಗಿಗಳನ್ನು ಹಾಜಿಪುರಕ್ಕೆ ತಂದು, ಅಲ್ಲಿಂದ ಹೆಚ್ಚಿನ ಬೋಗಿಗಳನ್ನು ಅಳವಡಿಸಿ ಆನಂದ್ ವಿಹಾರ ಟರ್ಮಿನಲ್ ರೈಲ್ವೆ ನಿಲ್ದಾಣಕ್ಕೆ ಕಳಿಸಲಾಗುತ್ತದೆ ಎಂದು ಸಿಪಿಆರ್ ಒ ರಾಜೇಶ್ ಕುಮಾರ್ ಹೇಳಿದ್ದಾರೆ. 
SCROLL FOR NEXT