ದೇಶ

ಎತ್ತರದ ಪ್ರದೇಶಗಳಲ್ಲಿ ದೇಶ ಕಾಯುವ ಯೋಧರಿಗೆ ಸ್ವದೇಶಿ ನಿರ್ಮಿತ ಸಮವಸ್ತ್ರ: ಸೇನೆ

Nagaraja AB

ನವದೆಹಲಿ: ಎತ್ತರದ ಪರ್ವತ ಪ್ರದೇಶಗಳಲ್ಲಿ  ದೇಶ ಕಾಯುವ ಯೋಧರಿಗೆ ಚಳಿ, ಗಾಳಿಯಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸ್ವದೇಶಿ ನಿರ್ಮಿತ ಉಡುಪು ಹಾಗೂ ಇನ್ನಿತರ ಸಲಕರಣೆಗಳನ್ನು ಭಾರತೀಯ ಸೇನೆ ಖರೀದಿಸುತ್ತಿದೆ.

ವಿವಿಧ ಕಡೆಗಳಲ್ಲಿನ ಎತ್ತರದ ಪ್ರದೇಶಗಳಲ್ಲಿ ಸುಮಾರು 40 ಸಾವಿರ ಯೋಧರನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಅವರ ಉಡುಪಿಗಾಗಿ ಪ್ರತಿ ಆರು ವರ್ಷಕ್ಕೊಮ್ಮೆ ತಗಲುತ್ತಿದ್ದ 2.5 ಕೋಟಿ ಆಮದು ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಸ್ಥಳೀಯ ತಯಾರಕರನ್ನು ಆಯ್ಕೆಮಾಡುವ ಪ್ರಸ್ತಾವನ್ನು ಸೇನೆ ಪ್ರಾರಂಭಿಸಿದೆ.

ಎತ್ತರದ ಪ್ರದೇಶಗಳಲ್ಲಿ 10 ಡಿ ಸೆಲ್ಸಿಯಸ್ ಗಿಂತಲೂ ಕಡಿಮೆ ಉಷ್ಠಾಂಶದಲ್ಲಿ ಸೈನಿಕರು ಸೇವೆ ಸಲ್ಲಿಸುತ್ತಾರೆ. ಅಂತಹ ವಾತಾವರಣಕ್ಕನುಗುಣವಾಗಿ ಹಗುರವಾದ ಬಟ್ಟೆಗಳ ಅಗತ್ಯವಿದೆ. ಪ್ರತಿ ಆರು ತಿಂಗಳಿಗೊಮ್ಮೆ ಸೇನೆಗಾಗಿ ಉಡುಪು ಹಾಗೂ ಮತ್ತಿತರ ಸಲಕರಣೆಗಳನ್ನು ಬದಲಾಯಿಸಲಾಗುತ್ತದೆ.

ಹವಾಮಾನ ಪರಿಸ್ಥಿತಿ ಹಾಗೂ ಸೈನಿಕರ ದೈಹಿಕ ಆರೋಗ್ಯ ರಕ್ಷಣೆಗಾಗಿ ಸೂಕ್ತ ಮಾರ್ಗದರ್ಶನ ರೂಪಿಸಲಾಗಿದೆ ಎಂದು ಹೇಳುವ ಸೇನಾ ಅಧಿಕಾರಿ, ಕ್ಯಾರಾಬಿನರ್ಸ್, ರಾಕ್ ಪಿಚೊನ್ಸ್, ಸಮ್ಮರ್ ಸೂಟ್, ಮತ್ತಿತರ ಉತ್ಪನ್ನಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಂಟು ಉತ್ಪನ್ನಗಳ ಪ್ರಾಯೋಗಿಕ ಪರೀಕ್ಷೆ ನಡೆಸಿ, ಎರಡನ್ನು ಸೇನೆಯ ಸಭೆಯಲ್ಲಿ ಗುರುತಿಸಲಾಗಿತ್ತು, ನಂತರ ಡಿಸೆಂಬರ್ 2018ರಲ್ಲಿ ಮತ್ತೊಂದು ಸಭೆ ನಡೆಸಿ,  ಬಿಡ್ ಕರೆದಿದ್ದು, ಹೊಸ ತಂತ್ರಜ್ಞಾನವನ್ನು ನೋಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸೇನೆ ಈಗ ಸ್ವಿಟ್ಜರ್‌ಲ್ಯಾಂಡ್ ನಿಂದ ವಿಶೇಷವಾದ  ಗೇರ್ ಸೇರಿದಂತೆ ನಾರ್ವೇ, ಪಿನ್ ಲ್ಯಾಂಡ್ ಮತ್ತಿತರ ರಾಷ್ಟ್ರಗಳಿಂದ ಸೇನಾ ಸಲಕರಣೆಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಸಿಯಾಚಿನ್, ದ್ರಾಸ್, ಕಾರ್ಗಿಲ್  ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಲ್ಲಿ ಭದ್ರತೆಗೆಗಾಗಿ ನಿಯೋಜಿಸಿರುವ ಯೋಧರಿಗೆ ಉಪಕರಣ ಖರೀದಿಸಲಾಗುತ್ತಿದೆ.
ಪ್ರತಿ ಆರು ತಿಂಗಳಿಗೊಮ್ಮೆ ವೆಚ್ಚವಾಗುತ್ತಿದ್ದ 2.5 ಕೋಟಿ ರೂ. ಹಣವನ್ನು ಉಳಿಸುವುದು ನಮ್ಮ ಗುರಿಯಾಗಿದೆ ಎಂದು  ಮತ್ತೋರ್ವ ಹಿರಿಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT