ಸಾಂದರ್ಭಿಕ ಚಿತ್ರ, ಒಳ ಚಿತ್ರದಲ್ಲಿ ವೈದ್ಯ ಡಾ ಸುನಿಲ್ ಮಂತ್ರಿ 
ದೇಶ

ಕಾರು ಚಾಲಕನ ಕೊಂದು ಆಸಿಡ್ ತುಂಬಿದ ಡ್ರಮ್ ನಲ್ಲಿ ಹಾಕಿದ ವೈದ್ಯ: ಮಧ್ಯ ಪ್ರದೇಶದಲ್ಲೊಂದು ಕ್ರೂರ ಘಟನೆ!

ರಾಜ್ಯ ಸರ್ಕಾರಿ ವೈದ್ಯ ತನ್ನ ಕಾರು ಚಾಲಕನನ್ನು ಕೊಂದು ಹಲವು ಭಾಗಗಳಾಗಿ ಕತ್ತರಿಸಿ ತನ್ನ ಬಾತ್ ...

ಭೋಪಾಲ್: ರಾಜ್ಯ ಸರ್ಕಾರಿ ವೈದ್ಯ ತನ್ನ ಕಾರು ಚಾಲಕನನ್ನು ಕೊಂದು ಹಲವು ಭಾಗಗಳಾಗಿ ಕತ್ತರಿಸಿ ತನ್ನ ಬಾತ್ ರೂಂನಲ್ಲಿ ಆಸಿಡ್ ತುಂಬಿದ ಡ್ರಮ್ ನಲ್ಲಿ ಹಾಕಿಟ್ಟ ಘಟನೆ ಮಧ್ಯಪ್ರದೇಶದ ಹೊಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ವೈದ್ಯರು ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಕಾರು ಚಾಲಕ ವೀರೇಂದ್ರ ಸಂಶಯ ವ್ಯಕ್ತಪಡಿಸುತ್ತಿದ್ದ, ಅಲ್ಲದೆ ಆಗಾಗ ಕಿರುಕುಳ ಕೂಡ ನೀಡುತ್ತಿದ್ದ. ಇದರಿಂದ ಬೇಸತ್ತ ವೈದ್ಯ ಸುನಿಲ್ ಮಂತ್ರಿ(58ವ) ಕಾರು ಚಾಲಕನನ್ನು ಕೊಂದು ಆತನ ಮೃತದೇಹವನ್ನು ಕನಿಷ್ಠವೆಂದರೂ 24 ಭಾಗಗಳಾಗಿ ತುಂಡು ಮಾಡಿ ಡ್ರಮ್ ಒಳಗೆ ಹಾಕಿಟ್ಟರು.

ಭೋಪಾಲ್ ನಿಂದ 80 ಕಿಲೋ ಮೀಟರ್ ದೂರದಲ್ಲಿ ಹೊಶಂಗಬಾದ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ವೈದ್ಯರ ನಿವಾಸಕ್ಕೆ ದಾಳಿ ನಡೆಸಿ ತನಿಖೆ ಮಾಡಿ ಪ್ರಕರಣವನ್ನು ಬೇಧಿಸಿದ್ದಾರೆ.

ವೀರೇಂದ್ರ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ. ಈ ಸಂಬಂಧ ವೈದ್ಯರ ಮೇಲೆ ಸಂಶಯ ಉಂಟಾಗಿ ನಿನ್ನೆ ಬೆಳಗ್ಗೆ ವೈದ್ಯ ಮಂತ್ರಿಯ ಮನೆಯಲ್ಲಿ ವೀರುವಿನ ಕಡೆಯವರು ಜಗಳ ಮಾಡಿದ್ದರು. ಅಲ್ಲದೆ ಪೊಲೀಸರಿಗೆ ಸಹ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಪೊಲೀಸರ ತಂಡ ಡಾ ಮಂತ್ರಿ ಮನೆಗೆ ಆಗಮಿಸಿ ವಿಚಾರಣೆ ನಡೆಸಿದಾಗ ಸಂಶಯಬಂದು ಬಾತ್ ರೂಂಗೆ ಹೋದರು. ಅದನ್ನು ತೆರೆದು ನೋಡಿದಾಗ ಆಸಿಡ್ ತುಂಬಿದ ಡ್ರಮ್ ನಲ್ಲಿ ವೀರೇಂದ್ರನ ಶವದ ಭಾಗಗಳನ್ನು ತುಂಬಿಸಿ ಇಡಲಾಗಿತ್ತು. ಪೊಲೀಸರು ಸತತ ವಿಚಾರಣೆ ನಡೆಸಿದಾಗ ತಾನು ವೀರೇಂದ್ರನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೀರಿ ಎಂದು ಮಾತ್ರವಲ್ಲದೆ ಕಾರು ಚಾಲಕ ವೀರೇಂದ್ರನ ಬಳಿ ಬೇರೆ ಏನೋ ವಿಚಾರಗಳಿದ್ದು ಈ ಮೂಲಕ ವೈದ್ಯರಿಗೆ ಸತತವಾಗಿ ಬೆದರಿಕೆ ಹಾಕುತ್ತಿದ್ದಿರಬೇಕು. ಇದರಿಂದ ನೊಂದು ವೈದ್ಯರು ಈ ಕೃತ್ಯ ಎಸಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್