ದೇಶ

ಚಿಟ್ ಫಂಡ್ ಹಗರಣ: ಫೆ. 9ಕ್ಕೆ ಸಿಬಿಸಿ ನಿಂದ ಕೋಲ್ಕತ್ತಾ ಪೋಲೀಸ್ ಆಯುಕ್ತರ ವಿಚಾರಣೆ

Raghavendra Adiga
ನವದೆಹಲಿ: ಶಾರದಾ ಹಗರಣಕ್ಕೆ ಸಂಬಂಧಿಸಿ ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು  ಕೇಂದ್ರೀಯ ತನಿಖಾ ದಳ (ಸಿಬಿಐ)  ಫೆಬ್ರವರಿ 9ರಂದು ಶಿಲ್ಲಾಂಗ್ ನಲ್ಲಿ ವಿಚಾರಣೆ ನಡೆಸಲಿದೆ.
ಸಿಬಿಐ ಅದರ ದೆಹಲಿ, ಭೋಪಾಲ್ ಮತ್ತು ಲಖನೌ ಘಟಕಗಳಿಂದ 10 ಅಧಿಕಾರಿಗಳನ್ನು ತನ್ನ ಕೋಲ್ಕತಾ ಕಛೇರಿಗೆ ವರ್ಗಾಯಿಸಿದೆ.ಫೆಬ್ರವರಿ 20ರ ತನಕ ಕುಮಾರ್ ಸೇರಿದಂತೆ ಕೆಲವು ಉನ್ನತ ಅಧಿಕಾರಿಗಳ ವಿಚಾರಣೆ ನಡೆಸುವುದಕ್ಕಾಗಿ ಸಿಬಿಐ ಈ ಕ್ರಮ ತೆಗೆದುಕೊಂಡಿದೆ.
ಹೆಚ್ಚುವರಿ ಎಸ್ಪಿ ವಿ.ಎಂ ಮಿತ್ತಲ್, ಸುರೇಂದ್ರ ಕುಮಾರ್ ಮಲಿಕ್, ಚಂದರ್ ಡೀಪ್, ಉಪ ಎಸ್.ಪಿ. ಅತುಲ್ ಹಜೆಲಾ, ಅಲೋಕ್ ಕುಮಾರ್ ಸಾಹಿ ಮತ್ತು ಪಿ.ಕೆ. ಶ್ರೀವಾಸ್ತವ, ಇನ್ಸ್ ಪೆಕ್ಟರ್ ಹರಿ ಶಂಕರ್ ಚಂದ್, ರಿತೇಶ್ ಅವರೊಂದಿಗೆ  ಹೊಸದಿಲ್ಲಿಯ ವಿಶೇಷ ಘಟಕದಿಂದ ಪೊಲೀಸ್ ಅಧೀಕ್ಷಕ ಹಾಗೂ  ಎಸ್ಪಿ ಜಗರೂಪ್ ಎಸ್. ದನಿ ಮತ್ತು ಸುರಜಿತ್ ದಾಸ್ ಅವರುಗಳು ಕೋಲ್ಕತ್ತಾದಲ್ಲಿ ಕ್ಯಾಂ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಧಿಕಾರಿಗಳು ತಾತ್ಕಾಲಿಕವಾಗಿ ಸಿಬಿಐ, ಇಒ -4 ಘಟಕಕ್ಕೆ ಸೇರಲಿದ್ದಾರೆ. ಇವರನ್ನು  ಶುಕ್ರವಾರ ಕೊಲ್ಕತ್ತಾಗೆ ತಲುಪಲು ಕೇಳಲಾಗಿದ್ದು, ಫೆಬ್ರವರಿ 20ರವರೆಗೆ  ಅವರನ್ನು ಈ ಹುದ್ದೆಗೆ ನಿಯೋಜಿಸಲಾಗುತ್ತಿದೆ.
"ನಿರ್ದಿಷ್ಟ ದಿನಾಂಕದಂದು ಕುಮಾರ್ ಅವರಿಗೆ ನೋಟೀಸ್ಜಾರಿಗೊಳಿಸುವ ನಿರ್ಧಾರವನ್ನು ಪ್ರಕರಣದ ತನಿಖಾಧಿಕಾರಿ ತೆಗೆದುಕೊಳ್ಳಲಿದ್ದಾರೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಾರದಾ ಚಿಟ್ ಫಂಡ್ ಹಗರಣತನಿಖೆಗೆ ಸಿಬಿಐ ಜಗೆ ಸಹಕರಿಸಲು ಕೋಲ್ಕತ್ತ ಪೊಲೀಸ್ ಕಮೀಷನರ್ ರಾಜೀವ್ ಕುಮಾರ್ ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆದರೆ ಸಿಬಿಐ ಪೋಲೀಸ್ ಅಆಯುಕ್ತರನ್ನು ಬಂಧಿಸುವಂತಿಲ್ಲ ಎಂದೂ ಕೋರ್ಟ್ ಸೂಚಿಸಿದೆ.
SCROLL FOR NEXT