ದೇಶ

ಒಂದು ಪರೀಕ್ಷೆ, ಹಲವು ಹುದ್ದೆ: ಯುಪಿಎಸ್ ಸಿ ಸಲಹೆ

Lingaraj Badiger
ಭುವನೇಶ್ವರ: ಯುವಕರಿಗೆ ಉತ್ತಮ ಉದ್ಯೋಗ ಅವಕಾಶ ನೀಡುವುದಕ್ಕಾಗಿ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಪ್ರಮುಖ ನಿರ್ಧಾರವೊಂದು ತೆಗೆದುಕೊಂಡಿದ್ದು, ಹಲವು ಹುದ್ದೆ, ಒಂದು ಪರೀಕ್ಷೆ ನಿಯಮ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಂದರ್ಶನ ಹಂತ ತಲುಪಿದ ಅಭ್ಯರ್ಥಿಗಳನ್ನು ಇತರೆ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಂತೆ ನಾವು ಕೇಂದ್ರ ಸರ್ಕಾರಕ್ಕೆ ಮತ್ತು ನೇಮಕಾತಿ ಸಂಸ್ಥೆಗಳಿಗೆ ಶಿಫಾರಸು ಮಾಡಿದ್ದೇವೆ ಎಂದು ಯುಪಿಎಸ್ ಸಿ ಅಧ್ಯಕ್ಷ ಅರವಿಂದ್ ಸಕ್ಸೆನಾ ಅವರು ಹೇಳಿದ್ದಾರೆ.
ಭುವನೇಶ್ವರದಲ್ಲಿ ರಾಜ್ಯ ಲೋಕಸೇವಾ ಆಯೋಗಗಳ ಅಧ್ಯಕ್ಷರ 21ನೇ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಕ್ಸೆನಾ ಅವರು, ಪ್ರತಿವರ್ಷ ಸುಮಾರು 11 ಲಕ್ಷ ಯುವಕರು ನಾಗರಿ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಾರೆ. ಇದರಲ್ಲಿ ಅರ್ಧದಷ್ಟು ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆ ಬರೆಯುತ್ತಾರೆ. ಆದರೆ ಅಂತಿಮವಾಗಿ ಕೇವಲ 600 ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗುತ್ತಾರೆ. 
ಸಂದರ್ಶನ ಹಂತ ತಲುಪಿದರೂ ಹಲವು ಅಭ್ಯರ್ಥಿಗಳು ಉತ್ತಮ ರ್ಯಂಕ್ ಪಡೆಯುವಲ್ಲಿ ವಿಫಲವಾಗುತ್ತಾರೆ. ಕೇವಲ ಅಂತಿಮ ಅಂತದಲ್ಲಿ ವಿಫಲವಾದ ಅಭ್ಯರ್ಥಿಗಳನ್ನು ಸರ್ಕಾರ ಮತ್ತು ಇತರೆ ಸಂಸ್ಥೆಗಳು ಇತರೆ ಹುದ್ದೆಗಳಿಗೆ ಪರಿಗಣಿಸಬೇಕು ಎಂದು ಸಕ್ಸೆನಾ ಅವರು ಹೇಳಿದ್ದಾರೆ.
SCROLL FOR NEXT