ದೇಶ

ಹೈದರಾಬಾದ್ ವೈದ್ಯರ ಯಡವಟ್ಟು, 9 ಇಂಚಿನ ಇಕ್ಕಳ ರೋಗಿ ಹೊಟ್ಟೆಯಲ್ಲೇ ಬಿಟ್ಟರು!

Lingaraj Badiger
ಹೈದರಾಬಾದ್​: ವೈದ್ಯರ ನಿರ್ಲಕ್ಷ್ಯದಿಂದಾಗಿ ಆಘಾತಕಾರಿ ಘಟನೆಯೊಂದು ಹೈದರಾಬಾದ್ ನ ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆ(ನಿಮ್ಸ್)ಯಲ್ಲಿ ನಡೆದಿದ್ದು, ಆಪರೇಷನ್​ ಮಾಡುವಾಗ ರೋಗಿಯ ಹೊಟ್ಟೆಯಲ್ಲಿ 9 ಇಂಚಿನ ಇಕ್ಕಳ ಬಿಟ್ಟಿದ್ದಾರೆ.
ಕಳೆದ ವರ್ಷ ನವೆಂಬರ್ 2 ರಂದು, ಹೈದರಾಬಾದ್ ಮೂಲದ 33 ವರ್ಷದ ಮಹಿಳೆಯೊಬ್ಬರು ಅನಾರೋಗ್ಯ ಕಾರಣದಿಂದ ಪ್ರತಿಷ್ಠಿತ ನಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಡಿಸ್ಚಾರ್ಜ್​ ಆಗಿ ಮನೆಗೆ ಬಂದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿತ್ತು.
ಹೊಟ್ಟೆನೋವು ಹೆಚ್ಚಾದ ಕಾರಣ ಮಹಿಳೆ ವಾಪಸ್ಸು ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡರು. ಅಷ್ಟೇ ಅಲ್ಲದೇ ಎಕ್ಸ್​-ರೇ ಕೂಡ ಮಾಡಿಸಿದರು. ಎಕ್ಸ್-ರೇ ರಿಪೋರ್ಟ್​ನಲ್ಲಿ ಬೆಚ್ಚಿಬೀಳಿಸುವ ಸಂಗತಿಯೊಂದು ಬೆಳಕಿಗೆ ಬಂದಿದೆ.
ವೈದ್ಯರು ಆಪರೇಷನ್ ಮಾಡುವ ವೇಳೆ 9 ಇಂಚಿನ ಇಕ್ಕಳವೊಂದನ್ನು ಹೊಟ್ಟೆಯಲ್ಲಿಯೇ ಬಿಟ್ಟಿದ್ದಾರೆ. ರಿಪೋರ್ಟ್​​ ನೋಡಿ ಭಯಭೀತಗೊಂಡ ಮಹಿಳೆ ತಕ್ಷಣ ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದಾರೆ. ಆಗ ವೈದ್ಯರು ಮತ್ತೆ ಆಪರೇಷನ್​ ಮಾಡಿ ಆ ಸಲಕರಣೆಯನ್ನು ಹೊಟ್ಟೆಯಿಂದ ಹೊರಗೆ ತೆಗೆದಿದ್ದಾರೆ.
ಈ ಕುರಿತು ನಿಮ್ಸ್ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದ್ದು, ವೈದ್ಯರ ನಿರ್ಲಕ್ಷ್ಯದ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಬಹುದಾಗಿದೆ.
SCROLL FOR NEXT