ದೇಶ

ರಾಫೆಲ್ ಒಪ್ಪಂದ ವಾಯುಪಡೆ ಬಲವರ್ಧನೆಗೋ ಅಥವಾ ಕೈಗಾರಿಕೋದ್ಯಮಿ ಬಲವರ್ಧನೆಗೋ: ಮೋದಿಗೆ ಶಿವಸೇನೆ ಪ್ರಶ್ನೆ

Srinivas Rao BV
ರಾಫೆಲ್ ಜೆಟ್ ಖರೀದಿ ವಾಯುಪಡೆ ಬಲವರ್ಧನೆಗೋ ಅಥವಾ ಕೈಗಾರಿಕೋದ್ಯಮಿಗಳ ಬಲವರ್ಧನೆಗೋ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಶಿವಸೇನೆ ಪ್ರಶ್ನಿಸಿದೆ. 
ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ದಿ ಹಿಂದೂ ಪತ್ರಿಕೆ ಭಾರತ-ಫ್ರಾನ್ಸ್ ನಡುವಿನ ರಾಫೆಲ್ ಒಪ್ಪಂದದ ವೇಳೆ ಪಿಎಂಒ ಪರ್ಯಾಯ ಮಾತುಕತೆಗೆ ರಕ್ಷಣಾ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದ್ದರ ಬಗ್ಗೆ ವರದಿ ಪ್ರಕಟಿಸಿದ್ದರ ಬೆನ್ನಲ್ಲೇ ಶಿವಸೇನೆ ಮೋದಿಯನ್ನು ಪ್ರಶ್ನಿಸಿದೆ. 
ಶಿವಸೇನೆ ಈ ಕುರಿತು ಸಾಮ್ನಾ ಪತ್ರಿಕೆಯಲ್ಲಿ ಸಂಪಾದಕೀಯ ಬರೆದಿದ್ದು, ಮೋದಿ ಸಂಸತ್ ನಲ್ಲಿ ದೇಶಭಕ್ತಿಯ ಬಗ್ಗೆ ಭಾಷಣ ಮಾಡಿದರು. ರಾಫೆಲ್ ಒಪ್ಪಂದವನ್ನು ಸಮರ್ಥಿಸಿಕೊಂಡರು ಆದರೆ ಅದರ ನಂತರದ ದಿನವೇ ಬಂದ ವರದಿ ದೇಶಭಕ್ತಿಯ ಬಗ್ಗೆ ಮಾತನಾಡುತ್ತಿದ್ದವರ, ಘೋಷಣೆ ಕೂಗುತ್ತಿದ್ದವರ ಧ್ವನಿಯನ್ನು ಅಡಗಿಸಿತ್ತು. ರಾಫೆಲ್ ಒಪ್ಪಂದ ವಾಯುಪಡೆ ಬಲವರ್ಧನೆಗೋ ಅಥವಾ ಕೈಗಾರಿಕೋದ್ಯಮಿ ಬಲವರ್ಧನೆಗೋ ಎಂಬುದನ್ನು ಮೋದಿ ಸ್ಪಷ್ಟಪಡಿಸಬೇಕೆಂದು ಶಿವಸೇನೆ ಆಗ್ರಹಿಸಿದೆ. 
SCROLL FOR NEXT