ರಾಬರ್ಟ್ ವಾದ್ರಾ, ಪ್ರಿಯಾಂಕಾ ಗಾಂಧಿ ವಾದ್ರಾ 
ದೇಶ

ಜನ ಸೇವೆ ಪ್ರಿಯಾಂಕಾಳ ಕರ್ತವ್ಯ, ದಯವಿಟ್ಟು ಆಕೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳಿ- ರಾಬರ್ಟ್ ವಾದ್ರಾ

ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ನಂತರ ಉತ್ತರ ಪ್ರದೇಶದಲ್ಲಿ ರೋಡ್ ಶೋ ನಡೆಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ನೀಡಿರುವ ಪ್ರಿಯಾಂಕಾ ಗಾಂಧಿ ವಾದ್ರಾಗೆ , ಆಕೆಯ ಪತಿ ರಾಬರ್ಟ್ ವಾದ್ರಾ ಶುಭ ಹಾರೈಸಿದ್ದಾರೆ.

ನವದೆಹಲಿ: ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ನಂತರ ಉತ್ತರ ಪ್ರದೇಶದಲ್ಲಿ ರೋಡ್ ಶೋ ನಡೆಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ನೀಡಿರುವ ಪ್ರಿಯಾಂಕಾ ಗಾಂಧಿ ರಾಜಕೀಯ ಭವಿಷ್ಯ ಉತ್ತಮವಾಗಿರಲಿ ಎಂದು ಆಕೆಯ ಪತಿ ರಾಬರ್ಟ್ ವಾದ್ರಾ ಶುಭ ಹಾರೈಸಿದ್ದಾರೆ.

ಫೇಸ್ ಬುಕ್ ನಲ್ಲಿ ಶುಭ ಸಂದೇಶ ಹಾಕಿರುವ ರಾಬರ್ಟ್ ವಾದ್ರಾ,  ತಮ್ಮಗೆ ಪರಿಪೂರ್ಣ ಪತ್ನಿ, ಉತ್ತಮ ಗೆಳತಿ ಹಾಗೂ ಮಕ್ಕಳಿಗೆ ಉತ್ತಮ ತಾಯಿಯಾಗಿರುವ ಪ್ರಿಯಾಂಕಾ, ದೇಶದ ಜನರ ಸೇವೆ ಹಾಗೂ ಉತ್ತರ ಪ್ರದೇಶದ ಉಸ್ತುವಾರಿ ಕಾರ್ಯ ವಹಿಸಿಕೊಳ್ಳುವ ಮೂಲಕ ಹೊಸ ಜೀವನ ಆರಂಭಕ್ಕೆ ಶುಭ ಹಾರೈಸುವುದಾಗಿ ಬರೆದುಕೊಂಡಿದ್ದಾರೆ.

ಬಹಳ ಪ್ರತೀಕಾರ ಮತ್ತು ಕೆಟ್ಟ ರಾಜಕೀಯ ವಾತಾವರಣವಿದೆ. ಆದರೆ, ಜನರ ಸೇವೆ ಹಾಗೂ ದೇಶದ ಸೇವೆ ಆಕೆಯ ಕರ್ತವ್ಯವೆಂಬುದು ನನ್ನಗೆ ಗೊತ್ತಿದೆ. ಆಕೆಯನ್ನು ಸುರಕ್ಷಿತವಾಗಿರಿಸಿಕೊಳ್ಳಿ ಎಂದು ಕೊನೆಯಲ್ಲಿ ನಮಸ್ತೆ  ಎಂದು ಹೇಳಿ ಅಂತಿಮಗೊಳಿಸಿದ್ದಾರೆ.
ಬಿಕಾನೆರ್ ನಲ್ಲಿ ಅಕ್ರಮ ಭೂ ವಿವಾದಕ್ಕೆ ಸಂಬಂಧಿಸಿದಂತೆ ಜೈಪುರದಲ್ಲಿ ಇಂದು ರಾಬರ್ಟ್ ವಾದ್ರಾ ಮತ್ತು ಆತನ ತಾಯಿ ಮೌರೀನ್  ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಕಳೆದ ವಾರ ದೆಹಲಿಯಲ್ಲಿನ ಇಡಿ ಕಚೇರಿಗೆ  ರಾಬರ್ಟ್ ವಾದ್ರಾ ಅವರನ್ನು ಡ್ರಾಪ್ ಮಾಡಿದ್ದ ಪ್ರಿಯಾಂಕಾ,ತಮ್ಮ ಪತಿಯ ಬೆನ್ನೆಲುಬು ಆಗಿ ಇರುವುದಾಗಿ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT