ದೇಶ

ಬನ್ನಿ, ಹೊಸ ರಾಜಕೀಯ ಆರಂಭಿಸೋಣ; ಉತ್ತರ ಪ್ರದೇಶ ಜನತೆಗೆ ಪ್ರಿಯಾಂಕಾ ಕರೆ

Sumana Upadhyaya
ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ತನ್ನ ಸಹೋದರನ ಜೊತೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು ಈ ಸಂದರ್ಭದಲ್ಲಿ ತಮ್ಮ ಮುಂದಿನ ರಾಜಕೀಯ ರೂಪುರೇಷೆಗಳ ಬಗ್ಗೆ ಹೇಳಿಕೊಂಡಿದ್ದಾರೆ. 
ಉತ್ತರ ಪ್ರದೇಶ ರಾಜ್ಯದ ಜನತೆಯೊಂದಿಗೆ ಹೊಸ ರೀತಿಯ ರಾಜಕೀಯವನ್ನು ಆರಂಭಿಸಲು ತಾವು ಸಿದ್ದರಾಗಿದ್ದು ಇದರಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿರುತ್ತಾರೆ ಎಂದಿದ್ದಾರೆ.
ಉತ್ತರ ಪ್ರದೇಶದ ಪೂರ್ವ ಮತ್ತು ಪಶ್ಚಿಮ ಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ಮತ್ತು ಜ್ಯೋತಿರಾದಿತ್ಯ ಸಿಂಧ್ಯ ಇಂದು ಲಕ್ನೋಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಶಕ್ತಿ ಆಪ್ ಮೂಲಕ ಮಾತನಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ನಾನು ನಾಳೆ ನಿಮ್ಮೆಲ್ಲರನ್ನು ಭೇಟಿ ಮಾಡಲು ಲಕ್ನೊಗೆ ಆಗಮಿಸುತ್ತಿದ್ದೇನೆ.
ನಾವೆಲ್ಲರೂ ಒಟ್ಟು ಸೇರಿ ಹೊಸ ರೀತಿಯ ರಾಜಕೀಯ ಆರಂಭಿಸಬಹುದು ಎಂದು ಭಾವಿಸಿದ್ದೇನೆ. ನನ್ನ ಕಿರಿಯ ಸ್ನೇಹಿತರು, ಸಹೋದರಿಯರು ಮತ್ತು ಸಮಾಜದ ದುರ್ಬಲ ವರ್ಗದವರು ಎಲ್ಲರೂ ಇದರಲ್ಲಿ ಭಾಗಿಯಾಗಿರುತ್ತಾರೆ, ಅವರ ಧ್ವನಿಯನ್ನು ಆಲಿಸಬಹುದಾಗಿದೆ. ಬನ್ನಿ, ಹೊಸ ರಾಜಕೀಯ ಆರಂಭಿಸೋಣ ಎಂದು ಆಪ್ ಮೂಲಕ ಸಂದೇಶ ಕೊಟ್ಟಿದ್ದಾರೆ.
ಇಂದು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಜ್ಯೋತಿರಾಧಿತ್ಯ ಸಿಂಧ್ಯ ಮೂವರೂ ವಿಮಾನ ನಿಲ್ದಾಣದಿಂದ ಪಕ್ಷದ ಕೇಂದ್ರ ಕಚೇರಿಗೆ ಆಗಮಿಸುವ ವೇಳೆ ರೋಡ್ ಶೋ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಯೋಜಿಸಿದ್ದಾರೆ.
ಇವರ ಆಗಮನ ಲೋಕಸಭೆ ಚುನಾವಣೆಗೆ ಮುನ್ನ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಿಂದ ಚುನಾವಣೆ ಪ್ರಚಾರಕ್ಕೆ ನಾಂದಿ ಎಂದು ಹೇಳಲಾಗುತ್ತಿದೆ. 
SCROLL FOR NEXT