ದೇಶ

2019ರಲ್ಲೂ ನರೇಂದ್ರ ಮೋದಿ ಅವರೇ ಪ್ರಧಾನಮಂತ್ರಿಯಾಗಲಿ: ಮುಲಾಯಂ ಸಿಂಗ್

Vishwanath S
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೇ ಪ್ರಧಾನಿಯಾಗದಂತೆ ತಡೆಯೊಡ್ಡಳು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್  ಬಿಎಸ್‌ಪಿ ನಾಯಕಿ ಮಯಾವತಿ ಜತೆ ಸೇರಿ ಮಹಾಘಟಬಂಧನ್ ರಚಿಸಿದ್ದರೆ ಇತ್ತ ಅಖಿಲೇಶ್ ಯಾದವ್ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಮಾತ್ರ 2019ರಲ್ಲೂ ನರೇಂದ್ರ ಮೋದಿ ಅವರೇ ಪ್ರಧಾನಮಂತ್ರಿಯಾಗಲಿ ಆ ತಾಕತ್ತು ಇರುವುದು ಅವರೊಬ್ಬರಿಗೆ ಎಂದು ಸಂಸತ್ ಸದನದಲ್ಲಿ ಹೇಳಿದ್ದಾರೆ. 
ಲೋಕಸಭೆಗೂ ಮುನ್ನ ಮುಲಾಯಂ ಸಿಂಗ್ ಯಾದವ್ ಅವರ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿರೋಧಿ ಪಕ್ಷದಲ್ಲಿದ್ದು ಪ್ರಧಾನಿ ಅವರನ್ನು ಹೊಗಳಿರುವುದು ಮಹಾಘಟಬಂದನ್ ಗೆ ನುಂಗಲಾರದ ತುತ್ತಾಗಿದೆ. 
ಲೋಕಸಭೆಯಲ್ಲಿ ಮಾತನಾಡಿದ ಮುಲಾಯಂ ಸಿಂಗ್ ಯಾದವ್ ಅವರು 2019ರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಆರಿಸಿ ಬರಲಿ. ಪ್ರಧಾನಿ ಮೋದಿ ಸಮೇತ ಲೋಕಸಭೆಗೆ ಇದೇ ಸಂಸದರು ಮತ್ತೊಮ್ಮೆ ಆರಿಸಿ ಬರಲಿ ಎಂದರು.
ಪ್ರಧಾನಿಯಾಗಿ ಎಲ್ಲರನ್ನು ಸಂತೋಷಗೊಳಿಸಲು ಸಾಧ್ಯವಾಗುವುದಿಲ್ಲ. ಆದರೆ ಅಂತಹ ಪ್ರಯತ್ನದಲ್ಲಿ ಮೋದಿ ಶ್ರಮಿಸಿದ್ದಾರೆ ಎಂದು ಹೇಳಿದರು. ಈ ವೇಳೆ ಮುಲಾಯಂ ಸಿಂಗ್ ಪಕ್ಕದಲ್ಲೇ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕುಳಿದ್ದರು. ಈ ವೇಳೆ ಮುಲಾಯಂ ಸಿಂಗ್ ಈ ಹೇಳಿಕೆ ಅವರನ್ನು ವಿಚಲಿತರಾಗುವಂತೆ ಮಾಡಿದ್ದಾರೆ.
SCROLL FOR NEXT