ದೇಶ

ಪ್ರೇಮಾಂಕುರಕ್ಕೆ ಕಾರಣವಾಯ್ತು ಮೋದಿ ಟ್ವೀಟ್: ಭಾರತ ಯುವಕನನ್ನು ವರಿಸಿದ ಶ್ರೀಲಂಕಾ ಯುವತಿ!

Raghavendra Adiga
ಮಂದಸೋರ್(ಮಧ್ಯಪ್ರದೇಶ): ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್ ಯುವಜೋಡಿಯೊಂದು ಹಸೆಮಣೆ ಏರಲು ಕಾರಣವಾಗಿದೆ ಎಂದರೆ ಅಚ್ಚರಿಯಾಗಬಹುದು. ಹೌದು! ಇದು ನಿಜ, ಇದರಲ್ಲಿ ಇನ್ನೊಂದು ವಿಶೇಷವೂ ಇದ್ದು ಅದೆಂದರೆ ಶ್ರೀಲಂಕಾ ಯುವತಿ ಹಂಸಿನಿ ಎದಿರೀಸಿಂಘೆ ಮಧ್ಯಪ್ರದೇಶದ ಯುವಕ ಗೋವಿಂದ ಪ್ರಕಾಶ್ ಅವರ ಕೈ ಹಿಡಿದಿದ್ದಾರೆ. ಈ ಜೋಡಿ ಫೆ. 10ರಂದು ವಿವಾಹವಾಗಿದ್ದು ಮಧ್ಯಪ್ರದೇಶದ ಮಂದಸೋರ್ ನಲ್ಲಿನ ಕುಚೋರ್ದ್ ಎಂಬ ಗ್ರಾಮದಲ್ಲಿ ಈ ಮದುವೆ ನಡೆದಿದೆ.
ಪ್ರೇಮವಾಗಲು ನೆರವಾಯ್ತು ಮೋದಿ ಟ್ವೀಟ್
ಪ್ರಧಾನಿ ಮೋದಿ 2015ರಲ್ಲಿ ಮಾಡಿದ್ದ ಟ್ವೀಟ್ ಒಂದನ್ನು ಗೋವಿಂದ್ ಲೈಕ್ ಮಾಡಿದ್ದರು. ಇದೇ ಟ್ವೀಟ್ ಅನ್ನು ಹಂಸಿನಿ ಸಹ ಲೈಕ್ ಮಾಡಿದ್ದಾರೆ. ಆಗ ಗೋವಿಂದ್ ಆಕೆ ಯಾರೆಂದು ಆನ್ ಲೈನ್ ಮೂಲಕ ಸರ್ಚ್ ಮಾಡಿ ಆಕೆಯೊಡನೆ ಸ್ನೇಹ ಬೆಳೆಸಿದ್ದಾರೆ. ಇಬ್ಬರ ಸ್ನೇಹ ಪ್ರೇಮವಾಗಿ ಬದಲಾಗಿದ್ದು ಇದೀಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
2017ರಲ್ಲಿ ಹಂಸಿನಿ ಭಾರತಕ್ಕೆ ಆಗಮಿಸಿ ಗೋವಿಂದ್ ಅವರ ಕುಟುಂಬವನ್ನು ಭೇಟಿಯಾಗಿದ್ದರು.ಅಂದಹಾಗೆ ಆ ವೇಳೆಗೆ ಗೋವಿಂದ್ ಇಂಜ್ನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಹಂಸಿನಿ ತಾನು ಸಹ ಭಾರತದಲ್ಲಿ ಫಿಸಿಯೋತೆರಪಿ ಕಲಿಯುವುದಕ್ಕಾಗಿ ಆಗಮಿಸಿದರು.
ಇದಾಗಿ ಹಂಸಿನಿ ಹಾಗೂ ಗೋವಿಒಂದ್ ತಮ್ಮ ಪ್ರೇಮದ ವಿಚಾರವನ್ನು ತಮ್ಮ ತಮ್ಮ ಕುಟುಂಬಕ್ಕೆ ತಿಳಿಸಿದ್ದಾರೆ. ಬೌದ್ದ ಧರ್ಮದ ಅನುಯಾಯಿಯಾಗಿದ್ದ ಹಂಸಿನಿ ಕುಟುಂಬ ಗೋವಿಂದ್ ಅವರ ಕುಟುಂಬದ ಜತೆ ಮಾತುಕತೆ ನಡೆಸಿದೆ.ಇದರ ಫಲಶ್ರುತಿ ಎಂಬಂತೆ ಎರಡೂ ಕುಟುಂಬಗಳು ಮದುವೆಗೆ ಸಮ್ಮತಿಸಿದ್ದು ಹಿಂದೂ ಸಂಪ್ರದಾಯದ ಅನುಸಾರ ಮದುವೆ ನಡೆದಿದೆ. ಈ ವಿವಾಹಕ್ಕೇ ಹಂಸಿನಿ ಕುಟುಂಬದ ಹದಿನೈದು ಮಂದಿ ಆಗಮಿಸಿ ವಧೂ ವರರನ್ನು ಆಶೀರ್ವದಿಸಿದ್ದಾರೆ.
SCROLL FOR NEXT