ದೇಶ

ಬಿಹಾರ: ಹುತಾತ್ಮ ಯೋಧರ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದ ಜಿಲ್ಲಾಧಿಕಾರಿ

Lingaraj Badiger
ಪಾಟ್ನಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ನಡೆದ ಭೀಕರ ಉಗ್ರ ದಾಳಿಯಲ್ಲಿ ೪೦ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು, ದೇಶಕ್ಕೆ ದೇಶವೇ ಯೋಧರ ಸಾವಿಗೆ ಕಂಬನಿ ಮಿಡಿಯುತ್ತಿದೆ. 
ಬಿಹಾರದ ಶೇಖಪುರ್ ಜಿಲ್ಲಾಧಿಕಾರಿ ಇನಾಯತ್ ಖಾನ್ ಅವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಉಗ್ರ ದಾಳಿಯಲ್ಲಿ ಹುತಾತ್ಮರಾದ ರಾಜ್ಯ ಇಬ್ಬರು ಯೋಧರ ಹೆಣ್ಣು  ಮಕ್ಕಳನ್ನು ದತ್ತು ಪಡೆಯುವ ಮೂಲಕ, ಯೋಧರ ಕುಟುಂಬದೊಂದಿಗೆ ನಾವಿಂದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಬಿಹಾರ ಕೇಡರ್ ಐಎಎಸ್ ಅಧಿಕಾರಿ ಇನಾಯತ್ ಖಾನ್ ಅವರು ಹುತಾತ್ಮರಾದ ಸಿಆರ್ ಪಿಎಫ್ ಯೋಧರಾದ ರತನ್ ಕುಮಾರ್ ಥಾಕೂರ್ ಹಾಗೂ ಸಂಜಯ್ ಕುನರ್ ಸಿನ್ಹಾ ಅವರ ಒಬ್ಬರು ಹೆಣ್ಣು ಮಕ್ಕಳನ್ನು ದತ್ತುಪಡೆಯುವುದಾಗಿ ಶನಿವಾರ ಘೋಷಿಸಿದ್ದಾರೆ.
ಆ ಇಬ್ಬರು ಹೆಣ್ಣು ಮಕ್ಳಳ ಶಿಕ್ಷಣ ಹಾಗೂ ಇತರೆ ಎಲ್ಲಾ ಖರ್ಚುವೆಚ್ಚಗಳನ್ನು ಜೀವನಪೂರ್ತಿ ತಾವೇ ನೋಡಿಕೊಳ್ಳುವುದಾಗಿ ಇನಾಯತ್ ಖಾನ್ ಅವರು ಹೇಳಿದ್ದಾರೆ. ಅಲ್ಲದೆ ತಮ್ಮ ಎರಡು ದಿನದ ವೇತನವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ್ದಾರೆ.
ರಾಜ್ಯದ ಇಬ್ಬರು ಹುತಾತ್ಮ ಯೋಧರ ಕುಟುಂಬಕ್ಕೆ ನಿಮ್ಮ ಒಂದು ದಿನದ ವೇತನವನ್ನು ನೀಡುವಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರಿಗೆ ಮನವಿ ಮಾಡುತ್ತೇನೆ ಎಂದು ಇನಾಯತ್ ಖಾನ್ ಅವರು ಹೇಳಿದ್ದಾರೆ.
SCROLL FOR NEXT