ದೇಶ

ಭಾರತದ ಮೇಲೆ ಮೊಘಲರ ದಾಳಿ ಇನ್ನೂ ನಿಂತಿಲ್ಲ, ಪುಲ್ವಾಮ ದಾಳಿ ಇದಕ್ಕೊಂದು ಉದಾಹರಣೆ: ಅಸ್ಸಾಂ ಸಿಎಂ

Srinivasamurthy VN
ದಿಸ್ಪುರ್: ದೇಶ ಸ್ವತಂತ್ರ್ಯಗೊಂಡ ಬಳಿಕವೂ ಭಾರತದ ಮೇಲೆ ಮೊಘಲರ ದಾಳಿ ಇನ್ನೂ ನಿಂತಿಲ್ಲ, ಪುಲ್ವಾಮಾ ದಾಳಿ ಇದಕ್ಕೊಂದು ಉದಾಹರಣೆಯಷ್ಟೇ ಎಂದು ಅಸ್ಸಾಂ ಸಿಎಂ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ.
ಅಸ್ಸಾಂನ ಲಖೀಂ ಪುರ್ ನಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸರ್ಬಾನಂದ ಸೋನೋವಾಲ್ ಅವರು, ಪುಲ್ವಾಮ ಉಗ್ರ ದಾಳಿಯನ್ನು ಮೊಘಲರ ದಾಳಿಗೆ ಹೋಲಿಕೆ ಮಾಡಿದರು. ಈ ವೇಳೆ ದೇಶ ಸ್ವತಂತ್ರ್ಯಗೊಂಡರೂ ಮೊಘಲರ ದಾಳಿ ಮಾತ್ರ ಇನ್ನೂ ನಿಂತಿಲ್ಲ. ಇದಕ್ಕೆ ಪುಲ್ವಾಮ ಉಗ್ರ ದಾಳಿ ಸ್ಪಷ್ಟ ಉದಾಹರಣೆ. ಪುಲ್ವಾಮ ಉಗ್ರ ದಾಳಿ ಇಸ್ಲಾಮಿಕ್ ಉಗ್ರರ ದಾಳಿಯಾಗಿದ್ದು, ದಾಳಿಯಲ್ಲಿ ನಮ್ಮ 40ಕ್ಕೂ ಅಧಿಕ ವೀರ ಯೋಧರು ಹುತಾತ್ಮರಾಗಿದ್ದಾರೆ. 
ಹೀಗಾಗಿ ನಾವು ಈಗಲೂ ಮೊಘಲರ ವಿರುದ್ಧ ಹೋರಾಟ ನಡೆಸಬೇಕಿದೆ. ಇಲ್ಲವಾದಲ್ಲಿ ಇಂತಹ ನೂರಾರು ಪುಲ್ವಾಮ ದಾಳಿಗಳು  ಎದುರಾಗುವುದಲ್ಲಿ ಅಚ್ಚರಿಯೇನಿಲ್ಲ ಎಂದು ಸಿಎಂ ಸರ್ಬಾನಂದ ಸೋನೋವಾಲ್ ಹೇಳಿದರು.
ಇದೇ ಫೆಬ್ರವರಿ 14ರಂದು ಗಡಿಗೆ ಕರ್ತವ್ಯ ಪಾಲನೆಗೆ ತೆರಳುತ್ತಿದ್ದ ಭಾರತೀಯ ಸೇನೆಯ ವಾಹನಗಳ ಮೇಲೆ  ಉಗ್ರರು ಸ್ಫೋಟಕ ತುಂಬಿದ ಕಾರು ನುಗ್ಗಿಸಿ ದಾಳಿ ಮಾಡಿದ್ದರು. ಈ ಘಟನೆಯಲ್ಲಿ 40ಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿದ್ದರು.
SCROLL FOR NEXT