ದೇಶ

ಲೋಕಸಭಾ ಚುನಾವಣೆ: ಎಐಎಡಿಎಂಕೆ-ಬಿಜೆಪಿ ಮತ್ತು ಪಿಎಂಕೆ ಮೈತ್ರಿ, ಸೀಟು ಹಂಚಿಕೆ

Vishwanath S
ಚೆನ್ನೈ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊಸ್ತಿಲಲ್ಲೇ ತಮಿಳುನಾಡಿನ ಪಾಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಮತ್ತು ಆಡಳಿತಾರೂಢ ಎಐಎಡಿಎಂಕೆ ಹಾಗೂ ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ.
ಲೋಕಸಭಾ ಚುನಾವಣೆಗೆ ಪಿಎಂಕೆ ಮತ್ತು ಬಿಜೆಪಿ ಪಕ್ಷಗಳೊಂದಿಗೆ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ.  
ಸೀಟು ಹಂಚಿಕೆ ಕುರಿತಂತೆ ಎಐಎಡಿಎಂಕೆ ಮಂಗಳವಾರ ಪಿಎಂಕೆ ಸ್ಥಾಪಕ ಡಾ.ಎಸ್‍.ರಾಮದಾಸ್‍ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದಂತೆ ತಮಿಳುನಾಡಿನ ಒಟ್ಟು 39 ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳನ್ನು ಪಿಎಂಕೆಗೆ ಹಂಚಿಕೆ ಮಾಡಲಾಗಿದೆ. ಇದಲ್ಲದೆ, ಮುಂದಿನ ವರ್ಷ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಒಂದು ಸೀಟು ಪಿಎಂಕೆಗೆ ನೀಡಲಾಗುತ್ತಿದೆ. 
ಇನ್ನು, ತಮಿಳುನಾಡು ಬಿಜೆಪಿ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಪಿಯೂಷ್‍ ಗೋಯಲ್‍ ಅವರೊಂದಿಗೆ ಮಂಗಳವಾರ ನಗರದಲ್ಲಿ ನಾಲ್ಕು ತಾಸು ಮಾತುಕತೆ ನಡೆಸಿದ ಎಐಎಡಿಎಂಕೆ ಸೀಟು ಹಂಚಿಕೆ ಅಂತಿಮಗೊಳಿಸಿದೆ. ಇದರಂತೆ ಬಿಜೆಪಿಗೆ ಐದು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ.
ಎಐಡಿಎಂಕೆ  ಸಂಯೋಜಕ ಪನ್ನೀರ್ ಸೆಲ್ವಂ ಮತ್ತು ಜಂಟಿ ಸಂಯೋಜಕ ಕೆ ಪಳನಿಸ್ವಾಮಿ ಪಿಎಂಕೆ ಸಹ ಸಂಸ್ಥಾಪಕ ಎಸ್ ರಾಮೋದಾಸ್ ಅವರೊಂದಿಗೆ ಮೈತ್ರಿಗೆ ಸಹಿ ಮಾಡಿವೆ, 10 ವರ್ಷಗಳ ನಂತರ ಈ ಎರಡು ಪಕ್ಷಗಳು ಮತ್ತೆ ಮೈತ್ರಿಗೆ ಕೈ ಜೋಡಿಸಿವೆ, 39 ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಎಐಎಡಿಎಂಕೆ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಪಿಎಂಕೆ ಒಂದು ರಾಜ್ಯಸಭೆ ಮತ್ತು ಆರು ಲೋಕಸಭೆ ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಎಐಎಡಿಎಂಕೆ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ತಿಳಿಸಿದರು.
ಪಿಎಂಕೆ ಸಂಸ್ಥಾಪಕ ಡಾ. ಎಸ್. ರಾಮದಾಸ್ ಮತ್ತು ಅವರ ಮಗ, ಸಂಸದ ಅನ್ಬುಮಣಿ ರಾಮದಾಸ್, ಹಿರಿಯ ಮುಖಂಡ ಜಿಕೆ ಮಣಿ, ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಮೈತ್ರಿ ಒಪ್ಪಂದವನ್ನು ಮಾಡಿಕೊಂಡರು.
SCROLL FOR NEXT