70 ವರ್ಷ ಭಾರತವನ್ನು ಲೂಟಿ ಮಾಡಿದ ದೇಶ ವಿರೋಧಿ ಪಕ್ಷ ನಮ್ಮದು: ಕಾಂಗ್ರೆಸ್ ವೆಬ್ ಸೈಟ್ 
ದೇಶ

70 ವರ್ಷ ಭಾರತವನ್ನು ಲೂಟಿ ಮಾಡಿದ ದೇಶ ವಿರೋಧಿ ಪಕ್ಷ ನಮ್ಮದು: ಕಾಂಗ್ರೆಸ್ ವೆಬ್ ಸೈಟ್

ಕಾಂಗ್ರೆಸ್ ಪಕ್ಷ ಸಾರ್ವಜನಿಕ ಸಂಪರ್ಕದಲ್ಲಿ ಸದಾ ಒಂದಿಲ್ಲೊಂದು ಯಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತದೆ. ಪಕ್ಷಕ್ಕೆ ತೀವ್ರ ಮುಜುಗರವಾಗುಂತಹ ಅಂಥಹದ್ದೇ ಒಂದು ಯಡವನ್ನು ಈಗ ಗುಜರಾತ್ ಕಾಂಗ್ರೆಸ್

ಅಹಮದಾಬಾದ್: ಕಾಂಗ್ರೆಸ್ ಪಕ್ಷ ಸಾರ್ವಜನಿಕ ಸಂಪರ್ಕದಲ್ಲಿ ಸದಾ ಒಂದಿಲ್ಲೊಂದು ಯಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತದೆ. ಪಕ್ಷಕ್ಕೆ ತೀವ್ರ ಮುಜುಗರವಾಗುಂತಹ ಅಂಥಹದ್ದೇ ಒಂದು ಯಡವನ್ನು ಈಗ ಗುಜರಾತ್ ಕಾಂಗ್ರೆಸ್ ಮಾಡಿಕೊಂಡಿದೆ. 
ಗುಜರಾತ್ ನ ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ ಸೈಟ್ ನಲ್ಲಿ ಪಕ್ಷದ ಬಗ್ಗೆ ವಿವರಣೆ ನೀಡುವಾಗ ದೇಶವನ್ನು 70 ವರ್ಷಗಳ ಕಾಲ ಲೂಟಿ ಹೊಡೆದ ಅತಿ ಹಳೆಯ ಹಾಗೂ ದೊಡ್ಡ ಪಕ್ಷದ ಭಾಗವಾಗಿ ಎಂದು ಬರೆಯಲಾಗಿತ್ತು. 
ಸ್ವಾತಂತ್ರ್ಯಾ ನಂತರ ದೇಶವಿರೋಧಿ ಚಾಂಪಿಯನ್, ಸ್ವಾಭಾವಿಕ ಅಪರಾಧಿ(ಥಗ್ಸ್)ಗಳ ಪಕ್ಷವಾಗಿ ಬೆಳೆದ ಪಕ್ಷ ನಮ್ಮದು ಎಂದು ವೆಬ್ ಸೈಟ್ ನಲ್ಲಿ ಬರೆಯಲಾಗಿತ್ತು. ಆದರೆ ತಕ್ಷಣವೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಅದನ್ನು ಬದಲಾವಣೆ ಮಾಡಿದ್ದು, ಭಾರತದ ಅತಿ ಹಳೆಯ ಪಕ್ಷಕ್ಕೆ ಸೇರ್ಪಡೆಗೊಳ್ಳಿ, ಬ್ರಿಟೀಷರ ವಿರುದ್ಧವಾಗಿ  ಕಾಂಗ್ರೆಸ್ ನ್ನು ಸ್ಥಾಪಿಸಲಾಗಿತ್ತು. ಸ್ವಾತಂತ್ರ್ಯಾ ನಂತರ ಸ್ವಾಭಾವಿಕ ಆಡಳಿತ ಪಕ್ಷವಾಗಿ ನಮ್ಮ ಪಕ್ಷ ಹೊರಹೊಮ್ಮಿತು ಎಂದು ಬದಲಾವಣೆ ಮಾಡಿದೆ. ಈ ಯಡವಟ್ಟಿನ ಕುರಿತಾಗಿ ಕಾಂಗ್ರೆಸ್ ಈಗಿನವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪಕ್ಷದ ಯಡವಟ್ಟಿನ ಸ್ಕ್ರೀನ್ ಶಾಟ್ ಗಳು ಎಲ್ಲೆಡೆ ಹರಿದಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!