ದೇಶ

ಕಾಶ್ಮೀರ ಸಮಸ್ಯೆಗೆ ಜವಾಹರ್‌ ಲಾಲ್‌ ನೆಹರೂ ಕಾರಣ: ಅಮಿತ್‌ ಶಾ

Lingaraj Badiger
ರಾಜಮಹೇಂದ್ರವರಂ: ಕಾಶ್ಮೀರ ಸಮಸ್ಯೆ ಕಗ್ಗಂಟಾಗಿ ಉಳಿಯಲು ದೇಶದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರು ಕಾರಣ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗುರುವಾರ ಆರೋಪಿಸಿದ್ದಾರೆ.
ನೆಹರೂ ಬದಲಾಗಿ ಸರ್ದಾರ್‌ ಪಟೇಲ್‌ ಅವರು ಭಾರತದ ಮೊದಲ ಪ್ರಧಾನಿಯಾಗಿದ್ದರೆ ಕಾಶ್ಮೀರ ವಿವಾದಕ್ಕೆ ಆಸ್ಪದ ದೊರಕುತ್ತಿರಲಿಲ್ಲ. ಸರ್ದಾರ್ ಪಟೇಲ್ ಅವರು ಹೈದರಾಬಾದ್ ಅನ್ನು ನಿಭಾಯಿಸಿದರು. ಹೀಗಾಗಿ ಅದು ಈಗ ಭಾರತದ ಗೌರವಯುತ ಭಾಗವಾಗಿದೆ. ಆದರೆ ನೆಹರೂ ಕಾಶ್ಮೀರವನ್ನು ನಿಭಾಯಿಸಿದ್ದರಿಂದ ಅದು ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪಾಕಿಸ್ಥಾನ ಕಾಶ್ಮೀರಕ್ಕಾಗಿ ಉಗ್ರವಾದವನ್ನು ಮಾಡುತ್ತಿದೆ. ಈ ಸಮಸ್ಯೆಗೆ ಯಾರಾದರೂ ಜವಾಬ್ಧಾರಾಗಿದ್ದರೆ ಅದು ನೆಹರೂ. ಸರ್ದಾರ್‌ ಪಟೇಲ್‌ ಅವರು ಅಂದು ಪ್ರಧಾನಿಯಾಗಿರುತ್ತಿದ್ದರೆ ಈ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಡೀ ದೇಶವೇ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರ ಪರವಾಗಿ ನಿಂತಿದ್ದರೆ, ಪ್ರತಿಪಕ್ಷ ಕಾಂಗ್ರೆಸ್‌ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಕಿಡಿ ಕಾರಿದರು. 
ಪ್ರಧಾನಿ  ಪುಲ್ವಾಮಾ ದಾಳಿ ಬಳಿಕ ಶೂಟಿಂಗ್‌ನಲ್ಲಿ ನಿರತರಾಗಿದ್ದರು ಎಂದು ಆರೋಪಿಸಿದೆ. ಕಾಂಗ್ರೆಸ್‌ ಎಷ್ಟು ಆರೋಪ ಮಾಡುತ್ತದೆಯೋ ಅಷ್ಟು ಮಾಡಲಿ ನಾವದನ್ನು ಸ್ವಾಗತಿಸುತ್ತೇವೆ ಎಂದರು.
SCROLL FOR NEXT