ದೇಶ

ಕಾಂಗ್ರೆಸ್ ಕಾರ್ಯಕರ್ತರಿಂದ ಮತಗಟ್ಟೆಗಳ ಲೂಟಿ: ಕೀರ್ತಿ ಅಜಾದ್ ವಿವಾದಾತ್ಮಾಕ ಹೇಳಿಕೆ

Nagaraja AB

ಪಾಟ್ನಾ:  ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಗಳನ್ನು ಲೂಟಿ ಮಾಡಿದ್ದರು ಎಂದು ಇತ್ತೀಚಿಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ದರ್ಬಾಂಗಾ ಸಂಸದ ಕೀರ್ತಿ ಅಜಾದ್ ವಿವಾದಾತ್ಮಾಕ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ.

ಸ್ವಕ್ಷೇತ್ರ ದರ್ಬಾಂಗಾದಲ್ಲಿಂದು ಸಮಾವೇಶವನ್ನುದ್ದೇಶಿಸಿ ಮಾತನಾಡಿದ  ಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಕೀರ್ತಿ ಅಜಾದ್, ಮಾಜಿ ಕಾಂಗ್ರೆಸ್ ನಾಯಕ ನಾಗೇಂದ್ರ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಗಳನ್ನು ಲೂಟಿ ಮಾಡುತ್ತಿದ್ದಾರೆ.  1999ರಲ್ಲಿ ನನ್ನ ತಂದೆ ಹಾಗೂ ನನ್ನಗಾಗಿ  ಮತಗಟ್ಟೆಗಳನ್ನು ಲೂಟಿ ಮಾಡಲಾಗಿತ್ತು. ಆಗ ವಿದ್ಯುನ್ಮಾನ ಮತಯಂತ್ರಗಳನ್ನು ಇನ್ನೂ ಪರಿಚಯಿಸಿರಲಿಲ್ಲ ಎಂದು ಅವರು ಹೇಳಿದರು.
ಕೀರ್ತಿ ಅಜಾದ್ ತಂದೆ ಬಾಗವತ್ ಜಾ ಅಜಾದ್ 1980ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ದಶಕಗಳಿಂದಲೂ ಬಿಜೆಪಿಯಲ್ಲಿದ್ದ ಕೀರ್ತಿ ಅಜಾದ್ ಅವರನ್ನು 2015ರಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ನಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು.
SCROLL FOR NEXT