ಮಾಯಾವತಿ, ಅಖಿಲೇಶ್ ಯಾದವ್ 
ದೇಶ

ಲೋಕಸಭೆ ಹಣಾಹಣಿ: ಮೈತ್ರಿ ಸೀಟು ಹಂಚಿಕೆ ಅಂತಿಮ, ಎಸ್ಪಿ 37, ಬಿಎಸ್ಪಿ 38 ಸ್ಥಾನಗಳಲ್ಲಿ ಸ್ಪರ್ಧೆ

ಲೋಕಸಭೆ ಚುನಾವಣೆಗೆ ಮುನ್ನ ಉತ್ತರ ಪ್ರದೇಶದಲ್ಲಿ ಮಹಾಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜಪಕ್ಷಗಳ ನಡುವಿನ ಸೀಟು ಹಂಚಿಕೆ ಚರ್ಚೆ ಅಂತ್ಯವಾಗಿದೆ.

ಲಖನೌ(ಉತ್ತರಪ್ರದೇಶ): ಲೋಕಸಭೆ ಚುನಾವಣೆಗೆ ಮುನ್ನ ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜಪಕ್ಷಗಳ ನಡುವಿನ ಸೀಟು ಹಂಚಿಕೆ ಚರ್ಚೆ ಅಂತ್ಯವಾಗಿದೆ. ಎರಡೂ ಪಕ್ಷಗಳ ಒಮ್ಮತದ ನಿರ್ಧಾರದಂತೆ ಮಾಜವಾದಿ ಪಕ್ಷ 37, ಬಹುಜನ ಸಮಾಜ ಪಕ್ಷ 38 ಸ್ಥಾನಗಳಲ್ಲಿಯೂ ಸ್ಪರ್ಧಿಸಲಿದೆ.
ಇದಕ್ಕೆ ಹಿಂದೆ ಮೈತ್ರಿ ಘೋಷಣೆ ಮಾಡಿದ ಸಂದರ್ಭ ಎರಡೂ ಪಕ್ಷಗಳು ತಲಾ 38 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಲಾಗಿತ್ತು. ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭೆ ಸ್ಥಾನಕ್ಗಳಿದೆ.
ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸಹಿ ಹಾಕಿದ ಹೇಳಿಕೆಗಳಲ್ಲಿ ಎರಡೂ ಪಕ್ಷಗಳ ಸೀಟು ಹಂಚಿಕೆ ಬಗ್ಗೆ ವಿವರಿಸಲಾಗಿದೆ.
ಕೈರಾನಾ, ಮೊರಾದಾಬಾದ್, ಸಂಭಲ್, ರಾಮ್ಪುರ್, ಮೇನ್ಪುರಿ, ಫಿರೋಜಾಬಾದ್, ಬಡಾನ್, ಬರೇಲಿ, ಲಖನೌ ಇತವಾಹ್, ಕಾನ್ಪುರ್, ಕನೋಜ್ಝಾನ್ಸಿ, ಬಂದಾ, ಅಲಹಾಬಾದ್, ಕೌಶಾಂಬಿ, ಫುಲ್ಪುರ್, ಫೈಜಾಬಾದ್, ಗೊಂಡಾ, ಗೋರಾಕ್ಪುರ್, ವಾರಣಾಸಿ ಮತ್ತು ಮಿರ್ಜಾಪುರ.ಸೇರಿ ಒಟ್ಟು 37 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಸ್ಪರ್ಧೆ ನಡೆಸಲಿದೆ.
ಸಹರಾನ್ಪುರ್, ಬಿಜ್ನೋರ್, ನಗೀನಾ, ಅಲಿಗಢ್, ಆಗ್ರಾ, ಫತೇಪುರ್ ಸಿಕ್ರಿ, ಧೌರಾಹಾರ, ಸಿಟಾಪುರ್, ಸುಲ್ತಾನ್ಪುರ್, ಪ್ರತಾಪ್ಗಡ್, ಕೈಸರ್ಗಂಜ್, ಬಸ್ತಿ, ಸೇಲಂಪುರ್, ಜೌನ್ಪುರ್, ಭೋಧೋಯಿ ಮತ್ತು ಡಿಯೋರಿಯಾ ಸೇರಿ ಒಟ್ಟು 38 ಕ್ಷೇತ್ರಗಳಲ್ಲಿ ಬಿಎಸ್ಪಿ ಕಣಕ್ಕಿಳಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್