ದೇಶ

ಏರೋ ಇಂಡಿಯಾ ಅಗ್ನಿ ಪ್ರಮಾದ: ಕಾರು ಮಾಲೀಕರಿಗೆ ಪರಿಹಾರ ನೀಡಲು ಸಿದ್ಧ ಎಂದ ವಿಮಾ ಕಂಪನಿಗಳು!

Srinivasamurthy VN
ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಸಂಭವಿಸಿದ್ದ ಅಗ್ನಿ ಪ್ರಮಾದದಲ್ಲಿ ಸುಟ್ಟು ಕರಕಲಾದ ಕಾರುಗಳಿಗೆ ವಿಮೆ ನೀಡಲು ತಾವು ಸಿದ್ಧ ಎಂದು ವಿಮಾ ಕಂಪನಿಗಳು ಮುಂದೆ ಬಂದಿವೆ.
ವಾರಾಂತ್ಯ ವಾದ್ದರಿಂದ ಇಂದು ವೈಮಾನಿಕ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷರು ಆಗಮಿಸಿದ್ದರು. ಅಂತೆಯೇ ಪಾರ್ಕಿಂಗ್ ಲಾಟ್ ನಲ್ಲೂ 500ಕ್ಕೂ ಹೆಚ್ಚು ವಾಹನಗಳು ಆಗಮಿಸಿದ್ದವು. ಈ ವೇಳೆ ಸುಮಾರು 300ಕ್ಕೂ ಅಧಿಕ ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದ್ದು. ಸುಮಾರು 272 ಕಾರುಗಳು ಬೆಂಕಿಗಾಹುತಿಯಾಗಿವೆ. ಬಯಲು ಪ್ರದೇಶದಲ್ಲಿನ ಹುಲ್ಲಿಗೆ ಬೆಂಕಿ ತಗುಲಿ ನಿಲ್ಲಿಸಿದ್ದ ಕಾರುಗಳಿಗೆ ಹತ್ತಿಕೊಂಡಿದೆ. ಇದರ ಪರಿಣಾಮ ದುಬಾರಿ ಬೆಲೆಯ ಕಾರುಗಳು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಇನ್ನು ಅಗ್ನಿ ದುರಂತದ ಮಾಹಿತಿ ತಿಳಿದ ಬೆನ್ನಲ್ಲೇ ವಿವಿಧ ವಿಮಾ ಕಂಪನಿಗಳಿಗೆ ಕಾರು ಮಾಲೀಕರು ದೂರು ನೀಡಿದ್ದು, ಈ ಸಂಬಂಧ ಸ್ಥಳಕ್ಕಾಗಮಿಸಿದ ವಿಮಾ ಕಂಪನಿಗಳ ಸಿಬ್ಬಂದಿ ಸ್ಥಳ ಮಹಜರು ಮಾಡಿದ್ದಾರೆ. ಅಂತೆಯೇ ಕಾರು ಮಾಲೀಕರಿಗೆ ವಿಮೆ ನೀಡುವ ಕುರಿತು ಆಶ್ವಾಸನೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ಕಾರುಗಳ ವಿಮೆಯನ್ನು ಪರಿಶೀಲಿಸಿ ಅವಧಿಯಾಧಾರದ ಮೇಲೆ ವಿಮೆ ನೀಡಲಾಗುತ್ತದೆ. ಸಂಪೂರ್ಣ ಬೆಂಕಿಗಾಹುತಿಯಾದ ಕಾರುಗಳಿಗೆ ಗರಿಷ್ಟ ಶೇ.90ರಷ್ಟು ವಿಮೆ ಪರಿಹಾರ ಮತ್ತು ವಿಶೇಷ ಪ್ರಕರಣಗಳಲ್ಲಿ ಕಾರಿನ ಬದಲಿಗೆ ಹೊಸ ಕಾರು ನೀಡುವ ಸಾಧ್ಯತೆ ಕೂಡ ಇದೆ ಎಂದು ಹೇಳಿದ್ದಾರೆ.
SCROLL FOR NEXT